Urdu   /   English   /   Nawayathi

118 ಕೋಟಿ ಮೌಲ್ಯದ ಆಸ್ತಿ ಇ.ಡಿ ವಶ

share with us

ಬೆಂಗಳೂರು: 20 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಪ್ರಾಣಿ ಕಲಾಕೃತಿಗಳ ಕಲಾವಿದ, ಬ್ರಿಟಿಷ್‌ ಪ್ರಜೆ ಎಡ್ವಿನ್‌ ಜೋಬರ್ಟ್‌ ವೆನಿಂಗನ್‌ ಅವರ ಆಸ್ತಿ ಕಬಳಿಸಿದ ಆರೋಪಕ್ಕೆ ಒಳಗಾಗಿರುವ ಕುದುರೆ ತರಬೇತುದಾರ ಮೈಕೆಲ್‌ ಫ್ಲಾಯ್ಡ್‌ ಈಶ್ವರ್‌ ಅವರ ₹ 118 ಕೋಟಿ ಮೌ‌ಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ. ಮೈಸೂರು ನಜರಬಾದ್‌ ಮೋಹಲ್ಲಾದ ಹೈದರ್‌ ಆಲಿ ರಸ್ತೆಯ (ಅಬ್ಬಾ ರಸ್ತೆ) ‘ಬಿಸಲ್‌ ಮುಂಟಿ’ ಬಂಗಲೆ, ಕೇರಳದ ವಯನಾಡ್‌ನ ಕಾಫಿ ತೋಟ (220.16 ಎಕರೆ ವಿಸ್ತೀರ್ಣ), ಸತ್ತ ಪ್ರಾಣಿಗಳ ಚರ್ಮದಿಂದ ತಯಾರಿಸಿದ 70 ವಿವಿಧ ಪ್ರಾಣಿಗಳ ಕಲಾಕೃತಿಗಳು ಮತ್ತು ರೋಸ್‌ ವುಡ್‌ನಲ್ಲಿ ಮಾಡಿರುವ ಪೀಠೋಪಕರಣಗಳನ್ನು ಇ.ಡಿ ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿ ಇವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೈಕೆಲ್‌ ಫ್ಲಾಯ್ದ್‌ ಈಶ್ವರ್‌ ಮತ್ತಿತರರ ವಿರುದ್ಧ ಮೈಸೂರಿನ ಮೂರನೇ ಸಿಜೆಎಂ ನ್ಯಾಯಾಲಯದಲ್ಲಿ ಸಿಐಡಿ ಅಪರಾಧ ತನಿಖಾ ವಿಭಾಗದ ಪೊಲೀಸರು ಐಪಿಸಿ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಸಲ್ಲಿಸಿದ್ದ ದೋಷಾರೋಪ ಪಟ್ಟಿ ಆಧರಿಸಿ ಇ.ಡಿ ತನಿಖೆ ಕೈಗೊಂಡಿದೆ. ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ವೆನಿಂಗನ್‌ ಸಲ್ಲಿಸಿದ್ದ ದೂರು ಆಧರಿಸಿ ಸಿಐಡಿ ತನಿಖೆ ನಡೆಸಿತ್ತು. ಈ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಸಿಐಡಿಗೆ ಆದೇಶಿಸಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا