Urdu   /   English   /   Nawayathi

ಐಟಿ, ಇಡಿ ದಾಳಿಗೆ ಹೆದರಿ ಅನರ್ಹ ಶಾಸಕರು ಬಿಜೆಪಿಗೆ ಪಕ್ಷಾಂತರ : ಕೃಷ್ಣಬೈರೇಗೌಡ

share with us

ಚಿಕ್ಕಬಳ್ಳಾಪುರ: 20 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅನರ್ಹ ಶಾಸಕರು ಐಟಿ, ಇಡಿ ದಾಳಿಗೆ ಹೆದರಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆಂದು ಮಾಜಿ ಸಚಿವ ಕೃಷ್ಣಬೈರೇಗೌಡ, ಪಕ್ಷಾಂತರಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ವಿರುದ್ದ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದಲ್ಲಿ ಬುಧವಾರ ಉಪ ಚುನಾವಣೆ ಪ್ರಯುಕ್ತ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸ‘ೆಯನ್ನು ಉದ್ದೇಶಿಸಿ ಮಾತನಾಡಿ, ಸುಪ್ರೀಂಕೋರ್ಟ್ ಪಕ್ಷ ವಿರೋಧಿಗಳನ್ನು ಅನರ್ಹರೆಂದು ಹೇಳಿದೆ. ಕ್ಷೇತ್ರಗಳ ಅಭಿವೃದ್ದಿಗಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಂದು ಹೇಳುತ್ತಿರುವುದು ಕಟ್ಟು ಕತೆ ಎಂದರು. ಕಾಂಗ್ರೆಸ್ ಪಕ್ಷ ಯಾವ ಶಾಸಕರಿಗೂ ದೊ್ರೀಹ ಮಾಡಿಲ್ಲ. ಪಕ್ಷದಿಂದ ಎಲ್ಲ ರೀತಿಯ ಅಧಿಕಾರ ಪಡೆದು ಶ್ರೀಮಂತರಾದ ನಂತರ ಪಕ್ಷ ದೊ್ರೀಹ ಮಾಡುವ ಕೆಲಸವನ್ನು ಅನರ್ಹ ಶಾಸಕರು ಮಾಡಿದ್ದಾರೆ. ಇವರನ್ನು ಶಾಶ್ವತವಾಗಿ ಅನರ್ಹಗೊಳಿಸುವ ತೀರ್ಪುನ್ನು ಉಪ ಚುನಾವಣೆಯಲ್ಲಿ ಮತದಾರರು ಮಾಡಲಿದ್ದಾರೆಂದರು. ಅನರ್ಹ ಶಾಸಕರಿ ಬಿಜೆಪಿ ಸೇರುವ ಬಗ್ಗೆ ಮೊದಲೇ ನಿರ್ಧಾರಗೊಂಡು ಅವರ ಕ್ಷೇತ್ರಗಳಿಗೆ ಸಿಎಂ ಯಡಿಯೂರಪ್ಪ ಕೋಟ್ಯಾಂತರ ರೂ, ಅನುದಾನ ಬಿಡುಗಡೆ ಮಾಡಿದ್ದಾರೆ. ಉಪ ಚುನಾವಣೆ ಮೂಲಕ ರಾಜ್ಯದ ಬೊಕ್ಕಸಕ್ಕೆ ನಷ್ಠ ಉಂಟು ಮಾಡುತ್ತಿರುವ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕೆಂದು ಕೃಷ್ಣಬೈರೇಗೌಡ ತಿಳಿಸಿದರು. ಈ ಸಂದ‘ರ್ದಲ್ಲಿ ಮಾಜಿ ಸಚಿವರಾದ ಹಾಲಿ ಶಾಸಕರಾದ ಎನ್.ಹೆಚ್.ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಕಾಂಗ್ರೆಸ್ ಅಭ್ಯರ್ಥಿ ನಂದಿ ಎಂ. ಅಂಜನಪ್ಪ, ಮುಖಂಡರಾದ ಜಿ.ಎಚ್.ನಾಗರಾಜ್, ಕೆ.ವಿ.ನವೀನ್ ಕಿರಣ್, ಗಂಗರೇಕಾಲುವೆ ನಾರಾಯಣಸ್ವಾಮಿ, ಯಲುವಹಳ್ಳಿ ರಮೇಶ್, ಮಾಜಿ ಶಾಸಕ ಎನ್.ಸಂಪಂಗಿ, ಎಸ್.ಎಂ.ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا