Urdu   /   English   /   Nawayathi

ಮಂಗಳನಲ್ಲಿ ಜೀವಿ ವಾಸದ ಬಗ್ಗೆ ಮಹತ್ವದ ದಾಖಲೆ ಲಭ್ಯ..! ಇದು ನಿಜವಾ?

share with us

ನ್ಯೂಯಾರ್ಕ್​: 20 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಭೂಮಿ ಹೊರತಾದ ಗ್ರಹದಲ್ಲಿ ಮಾನವ ವಾಸಕ್ಕೆ ಯೋಗ್ಯ ಎಂದು ಪರಿಗಣಿಸಲ್ಪಟ್ಟಿರುವ ಮಂಗಳನಲ್ಲಿ ಜೀವಿಯ ಇರುವಿಕೆ ಬಗ್ಗೆ ಮಹತ್ವದ ಪುರಾವೆ ಲಭಿಸಿದೆ. ಅಮೆರಿಕದ ಒಹಿಯೋ ವಿವಿಯ ಅಧ್ಯಯನ ತಂಡದ ವರದಿಯಲ್ಲಿ ಮಂಗಳನಲ್ಲಿ ಜೀವ ಇರುವಿಕೆ ಬಗ್ಗೆ ಫೋಟೋ ಸಹಿತ ಬಹಿರಂಗಪಡಿಸಿದೆ. ಈ ಅಧ್ಯಯನ ಭವಿಷ್ಯದ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿ ಪರಿಣಮಿಸಲಿದೆ ಎಂದು ಅಭಿಪ್ರಾಯಪಡಲಾಗಿದೆ.

US Scientist Claims Photos Show Evidence Of Life On Mars

ಮಂಗಳ ಗ್ರಹದಲ್ಲಿ ಜೀವ ಇರುವಿಗೆ ಬಗ್ಗೆ ಫೋಟೋ ಸಾಕ್ಷ್ಯ

ಹಲವಾರು ಮಾರ್ಸ್​ ರೋವರ್ಸ್​ಗಳ ಫೋಟೋಗಳ ಮೂಲಕ ಮಂಗಳನಲ್ಲಿ ಜೀವದ ಇರುವಿಕೆ ಬಗ್ಗೆ ಒಹಿಯೋ ವಿವಿ ಅಧ್ಯಯನ ತಂಡ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫ್ರೊ. ಎಮರಿಟಸ್ ವಿಲಿಯಂ ರೊಮೊಸರ್​, ಮಂಗಳ ಗ್ರಹದಲ್ಲಿ ಕೀಟ, ನೊಣ, ಸರೀಸೃಪದ ಮಾದರಿಯ ಪ್ರಾಣಿಗಳು ಇದೆ ಎಂದು ಹೇಳಿದ್ದಾರೆ. ಫೋಟೋದಲ್ಲಿ ಕಂಡುಬಂದ ಜೀವಿಗಳ ಬಗ್ಗೆ ವಿವಿಧ ಹಂತದಲ್ಲಿ ಪರೀಕ್ಷೆ ಮಾಡಲಾಗಿದೆ. ಫೋಟೋವನ್ನು ಯಾವುದೇ ರೀತಿಯಲ್ಲೂ ತಿರುಚದೇ ಮೂಲ ಪ್ರತಿಗೆ ಧಕ್ಕೆಯಾಗದೇ ಕೂಲಂಕಷವಾಗಿ ಪರೀಕ್ಷಿಸಲಾಗಿದೆ ಎಂದು ಅಧ್ಯಯನ ತಂಡ ಹೇಳಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا