Urdu   /   English   /   Nawayathi

ಮಂಗ ಸಾವು, ಅಧಿಕಾರಿಗಳಿಂದ ಪರಿಶೀಲನೆ

share with us

ಭಟ್ಕಳ: 12 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕೋಣಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬ್ಬತ್ತೆ ಹಡಿಲನಲ್ಲಿ ಮಂಗಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿದ್ದು, ಕೊಳೆತ ರೀತಿಯಲ್ಲಿ ಪತ್ತೆಯಾಗುತ್ತಿವೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸ್ಥಳಕ್ಕೆ ಅರಣ್ಯ ಹಾಗೂ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಹಡಿಲನ ಗಣೇಶ ಹೆಬ್ಬಾರ ಅವರ ತೋಟದಲ್ಲಿ ವಿವಿಧ ಕಡೆಗಳಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗಗಳ ದೇಹ ಪತ್ತೆಯಾಗಿವೆ. ಇದರಲ್ಲಿ ಒಂದು ಮಂಗ ಶನಿವಾರ ಮೃತಪಟ್ಟಿರಬಹುದು ಎಂಬ ಅನುಮಾನದಿಂದ ಸ್ಥಳೀಯರು ಅರಣ್ಯ ಇಲಾಖೆ, ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸಿಬ್ಬಂದಿಯೊಂದಿಗೆ ಆಗಮಿಸಿದ ಪಶು ವೈದ್ಯ ಮಿಥುನ ಅವರು, ಮೃತಪಟ್ಟ ಮಂಗಗಳ ಪರಿಶೀಲನೆ ನಡೆಸಿದರು. ಮಂಗಗಳ ದೇಹ ಕೊಳೆತು ನಾರುತ್ತಿರುವುದರಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಂಗಗಳ ದೇಹ ಕೊಳೆತಿರುವುದ ರಿಂದ ಮರಣೋತ್ತರ ಪರೀಕ್ಷೆಗೆ ಅರ್ಹವಲ್ಲ. ಮಂಗಗಳ ಸಾವಿನ ಕಾರಣ ತಿಳಿದು ಬರುತ್ತಿಲ್ಲ. ತಾಲೂಕಿನಲ್ಲಿ ಮಂಗನ ಕಾಯಿಲೆಯ ಭೀತಿ ಇಲ್ಲದಿರುವದರಿಂದ ಜನರು ಭಯಪಡುವ ಅಗತ್ಯವಿಲ್ಲ.
| ಡಾ. ಮಿಥುನ ಪಶು ವೈದ್ಯಾಧಿಕಾರಿ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا