Urdu   /   English   /   Nawayathi

ಬೆಂಗಳೂರು: ರಾತ್ರಿ ದೆವ್ವದ ಮುಖವಾಡ ಧರಿಸಿ, ಹೆದರಿಸುತ್ತಿದ್ದ 7 ಯುವಕರ ಬಂಧನ

share with us

ಬೆಂಗಳೂರು: 12 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಡರಾತ್ರಿ ದೆವ್ವದ ಮುಖವಾಡಿ ಧರಿಸಿ, ದಾರಿಹೋಕರನ್ನು ಬೆದರಿಸಿ, ತಮಾಷೆಗಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಏಳು ಯುವಕರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಪ್ರ್ಯಾಂಕ್​ ವಿಡಿಯೋ ಮಾಡಿ, ಟಿಕ್ ಟಾಕ್, ಯೂಟ್ಯೂಬ್​ನಲ್ಲಿ ಅಪ್‌ಲೋಡ್‌ ಮಾಡುವ ಉದ್ದೇಶದಿಂದ 7 ಯುವಕರ ತಂಡವು ನಿತ್ಯವೂ ದೆವ್ವದ ವೇಷ ಧರಿಸಿ ಯಶವಂತಪುರ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ತಡರಾತ್ರಿಯಲ್ಲಿ ಜನರನ್ನು ಬೆದರಿಸುವ ಕೆಲಸ ಮಾಡುತ್ತಿತ್ತು. ಇದರಿಂದ ಹೆದರಿ ಕೆಲವರು ಯಶವಂತಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, 7 ಯುವಕರನ್ನು ವಶಕ್ಕೆ ಪಡೆದು, ಪ್ರ್ಯಾಂಕ್​ ವಿಡಿಯೋ ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮರಾ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ‌. ‘ಸಡನ್ ಆಗಿ ದೆವ್ವದ ರೀತಿ ಅಡ್ಡ ಬರೋದರಿಂದ ಹೃದಯ ಕಾಯಿಲೆ ಇರುವವರಿಗೆ ತೊಂದರೆ ಆಗುತ್ತದೆ. ಅದಲ್ಲದೆ, ಈದ್ ಮಿಲಾದ್ , ಟಿಪ್ಪು ಜಯಂತಿ ಇತ್ತು. ಶನಿವಾರವಷ್ಟೇ  ಅಯೋಧ್ಯೆ ತೀರ್ಪು ಬಂದಿತ್ತು. ಇದೆಲ್ಲದರಿಂದ ಭಾನುವಾರ ತುಂಬಾ ಸೂಕ್ಷ್ಮ ದಿನವಾಗಿತ್ತು. ಹೀಗಾಗಿ ಅವರನ್ನು ತಕ್ಷಣ ವಶಕ್ಕೆ ಪಡೆಯಲಾಯಿತು’ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ. ‘ವಶಕ್ಕೆ ಪಡೆದ ಯುವಕರನ್ನು ವಿಚಾರಿಸಿದಾಗ ಯೂಟ್ಯೂಬ್ , ಟಿಕ್‌ಟಾಕ್‌ಗಾಗಿ ಈ ರೀತಿ ಪ್ರ್ಯಾಂಕ್‌ ವಿಡಿಯೊ ಮಾಡುತ್ತಿರುವುದಾಗಿ ಹೇಳಿದರು. ಬಂಧಿತ ಯುವಕರನ್ನು ಶಾನ್ ಮಲ್ಲಿಕ್,  ನವೀದ್,  ಸಜೀಲ್ ಮಹಮದ್, ಮಹಮದ್ ಅಕ್ಯೂಬ್,  ಸಾಕಿಬ್,  ಸೈಯದ್ ನಬೀಲ್,  ಯೂಸಫ್ ಅಹಮದ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಎಂಜಿನಿಯರಿಂಗ್‌,  ಬಿಬಿಎಂ, ಬಿಎಸ್‌ಸಿ ಅಗ್ರಿಕಲ್ಚರ್ ಓದುತ್ತಿದ್ದಾರೆ. ಎಚ್ಚರಿಕೆ ಕೊಟ್ಟು ಜಾಮೀನಿನ ಮೇಲೆ ಬಿಟ್ಟು ಕಳಿಸುತ್ತೇವೆ ಶಶಿಕುಮಾರ್ ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا