Urdu   /   English   /   Nawayathi

ಬಾನೆತ್ತರಕ್ಕೆ ಚಿಮ್ಮುತ್ತಿರುವ ಕೊಳವೆ ಬಾವಿ ನೀರು: ಆಶ್ಚರ್ಯ ಚಕಿತರಾದ ನೋಡುಗರು!

share with us

ಬಾಗಲಕೋಟೆ: 11 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸತತ ಮಳೆ, ಪ್ರವಾಹದಿಂದ ಜಿಲ್ಲೆಯ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ಕೊಳವೆ ಬಾವಿವೊಂದರಲ್ಲಿ 20 ರಿಂದ 30 ಅಡಿ ಎತ್ತರಕ್ಕೆ ನೀರು ಚಿಮ್ಮುದ್ದಿದ್ದು, ನೋಡಗರ ಗಮನ ಸೆಳೆಯುತ್ತಿದೆ. ನೀಲಗುಂದ ಗ್ರಾ.ಪಂ.ಸದಸ್ಯ ಹಾಗೂ ರೈತ ದ್ಯಾವಪ್ಪ ಕಾಟನಾಯಕ ಅವರ ಕೊಳವೆಬಾವಿಯಲ್ಲಿ ಈ ಘಟನೆ ನಡೆದಿದೆ. ಇವರು ಕಳೆದ ಐದು ವರ್ಷಗಳ ಹಿಂದೆ ತಮ್ಮ ಹೊಲದಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಆರಂಭದಲ್ಲಿ ನೀರು ಬಂದು ವರ್ಷದ ಬಳಿಕ ಸ್ಥಗಿತಗೊಂಡಿತ್ತು. ಹೀಗಾಗಿ ಕೊಳವೆ ಬಾವಿ ಹಾಗೆಯೇ ಬಿಡಲಾಗಿತ್ತು.ಈಚೆಗೆ ಸುರಿದ ಬಾರಿ ಮಳೆ, ಪ್ರವಾಹದಿಂದ ನೀಲಗುಂದ ಸುತ್ತಲೂ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ಕೊಳವೆ ಬಾವಿಯಲ್ಲಿ ನೀರು ತುಂಬಿ ಚಿಮ್ಮುತ್ತಿದೆ. ಇದನ್ನು ನೋಡಲು ಸುತ್ತಲಿನ ಹಳ್ಳಿನ ಜನರು ಆಗಮಿಸಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا