Urdu   /   English   /   Nawayathi

ಕೆಲಸವಿಲ್ಲ, ಇರಲು ಮನೆ, ತಿನ್ನಲು ಅನ್ನವಿಲ್ಲ... ಹಣಕ್ಕಾಗಿ ಸ್ನಾತಕೋತ್ತರ ಪದವೀಧರ ಮಾಡಿದ್ದೇನು ಗೊತ್ತಾ?

share with us

ಬೆಂಗಳೂರು: 11 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ದುಡ್ಡು ಮಾಡೋಕೆ ಜನ ಏನೆಲ್ಲಾ ಪ್ಲಾನ್ ಮಾಡ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಯಾಕಂದ್ರೆ ಹಣ ಕೊಡದಿದ್ರೆ ನಿಮ್ಮ ಮನೆಗೆ ಬಾಂಬ್ ಹಾಕ್ತೀನಿ ಅಂತಾ ಪತ್ರ ಹಾಕಿದ ಅಸಾಮಿಯನ್ನ ಇದೀಗ ಹೆಚ್​ಎಸ್​​ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ದೇವೇಂದ್ರ ಕುಮಾರ್ ಬಂಧಿತ ಆರೋಪಿಯಾಗಿದ್ದು, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ಸ್ನಾತಕೊತ್ತರ ಪದವಿ ಪಡೆದಿದ್ದ ಈತ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ದೇವೆಂದ್ರಗೆ ಸಾಫ್ಟ್​ವೇರ್​ ಎಂಜಿನಿಯರ್ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಆತ ವಿಧಿಯಿಲ್ಲದೇ ಕಾಲ್ ಸೆಂಟರ್​ನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿ ಸೂಕ್ತ ಸಂಬಳ ಸಿಗದ ಕಾರಣ ಹೊಟ್ಟೆ ತುಂಬಿಸಿಕೊಳ್ಳಲು ಉಬರ್ ಕ್ಯಾಬ್​ನಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದಾನೆ. ಆ ವೇಳೆ ಬೆನ್ನು ನೋವು ತೀವ್ರಗೊಂಡ ಹಿನ್ನೆಲೆ ಆ ಕೆಲಸ ಕೂಡ ಬಿಟ್ಟಿದ್ದ. ಆಗ ಎರಡು ತಿಂಗಳ ಮನೆ ಬಾಡಿಗೆ ನೀಡದೆ ಇದ್ದರೆ ಮನೆ ಖಾಲಿ ಮಾಡಿಸ್ತೀನಿ ಅಂತ ಮನೆ ಮಾಲೀಕ ವಾರ್ನ್ ಮಾಡಿದ್ದ‌‌. ನಂತರ ಹಣ ಕಟ್ಟದ ಕಾರಣ ಮನೆಯಿಂದ ಹೊರ ಹಾಕಲಾಗಿದೆ. ಸ್ನಾತಕೋತ್ತರ ಪದವಿ ಪಡೆದಿದ್ದ ದೇವೆಂದ್ರ ಸೂಕ್ತ ಕೆಲಸವಿಲ್ಲದೇ ನಿರುದ್ಯೋಗಿಯಾಗಿ ಹಾಗೆ ಮನೆಯಿಲ್ಲದೇ ಬೀದಿಪಾಲಾಗಿದ್ದ. ಅಷ್ಟು ಮಾತ್ರವಲ್ಲದೇ ಮೂರು ದಿನ ತುತ್ತು ಅನ್ನ ತಿನ್ನದೇ ಹಸಿವಿನಿಂದ ಸತ್ತು ಬದುಕಿದ್ದ ದೇವೆಂದ್ರ, ಕೊನೆಗೆ ಯುಟ್ಯೂಬ್ ಚಾನೆಲ್​ನಿಂದ ಪ್ರೇರಿತನಾಗಿದ್ದಾನೆ. ಈ ವಿಡಿಯೋದಲ್ಲಿರುವ ರೀತಿ ದೇವೇಂದ್ರ ಹೆಚ್ಎಸ್ಆರ್ ಲೇಔಟ್​​ನಲ್ಲಿ ಓರ್ವ ಶ್ರೀಮಂತನ ಮನೆಯ ಪೋಸ್ಟ್ ಬಾಕ್ಸ್​ನಲ್ಲಿ ಬೆದರಿಕೆ ಪತ್ರ ಬರೆದು ಹಾಕಿದ್ದ. ಅದರಲ್ಲಿ ಇ ಮೇಲ್ ಐಡಿ ಹಾಕಿ, ನೀವು ನನಗೆ 5 ಲಕ್ಷ ಹಣ ಕೊಡಿ. ಇಲ್ಲವಾದಲ್ಲಿ ನಿಮ್ಮ ಮನೆಗೆ ಬಾಂಬ್ ಇಡುವುದಾಗಿ ಬೆದರಿಸಿದ್ದ. ನಂತ್ರ ಈ ಬಗ್ಗೆ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ‌ ಎಫ್ಐಆರ್ ದಾಖಲಾಗಿತ್ತು. ಈ ವೇಳೆ ಹೆಚ್ಎಸ್ಆರ್ ಲೇಔಟ್ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಫೀಲ್ಡ್​​ಗೆ ಇಳಿದಿದ್ರು. ಮೊನ್ನೆ ಬೆಳಗಿನ ಜಾವ ಮತ್ತೆ ಮತ್ತೊಂದು ಮನೆಯ ಪೋಸ್ಟ್ ಬಾಕ್ಸ್​ಗೆ ಬೆದರಿಕೆ ಪತ್ರ ಹಾಕುತ್ತಿದ್ದ ವೇಳೆ ದೇವೇಂದ್ರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا