Urdu   /   English   /   Nawayathi

ಬಿಪಿನ್ ರಾವತ್ ಬೇಜವಾಬ್ದಾರಿಯುತ ಹೇಳಿಕೆ, ಯುದ್ಧಕ್ಕೆ ಪ್ರಚೋದನೆ- ಪಾಕಿಸ್ತಾನ ಸೇನೆ

share with us

ಇಸ್ಲಾಮಾಬಾದ್: 26 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪದೇ ಪದೇ ಬೇಜವಾಬ್ದಾರಿಯುತ ಹಾಗೂ ಪ್ರಾದೇಶಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆ ನೀಡುವ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಾಕಿಸ್ತಾನ ಸೇನೆ ಆರೋಪಿಸಿದೆ. ಪಿಒಕೆ ಉಗ್ರರ ನಿಯಂತ್ರಣದಲ್ಲಿರುವ ಪಾಕಿಸ್ತಾನದ ಭಾಗವಾಗಿದೆ ಎಂದು ಬಿಪಿನ್ ರಾವತ್ ವರ್ಣಿಸಿದ ಬೆನ್ನಲ್ಲೇ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರ್ ಅಸಿಫ್ ಘಾಪೂರ್ ಈ ರೀತಿಯಲ್ಲಿ  ಪ್ರತಿಕ್ರಿಯಿಸಿದ್ದಾರೆ. ಹೊಸದಾಗಿ ಪ್ರಸ್ತಾಪಿಸಿರುವ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಸ್ಥಾನದ ಮೇಲೆ ಕಣ್ಣಿಟ್ಟು , ಬಿಪಿನ್ ರಾವತ್ ಈ ರೀತಿಯ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ ಎಂದು ಘಾಪೂರ್ ಟೀಕಿಸಿದ್ದಾರೆ.

DG ISPR@OfficialDGISPR

 · 19h

Indian COAS repeatedly provoking war through irresponsible statements endangering regional peace for electioneering of political masters. From fake surgical strike todate his only success has been to turn Indian Army into a rogue force and getting them killed.(1of2).

DG ISPR@OfficialDGISPR

Indian Army Chief’s statements coupled with blood of innocents on hand, losses to Indian forces at the hands of Pakistan Armed Forces, heli crashes due to so called tech fault cum fratricide just to become Indian CDS is actually at the cost of professional military ethos.(2of2).

16.2K

10:13 PM - Oct 25, 2019

Twitter Ads info and privacy

6,366 people are talking about this

ಆದಾಗ್ಯೂ, ಘಾಪೂರ್ ಹೇಳಿಕೆಗೆ ಭಾರತೀಯ ಸೇನೆಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪಾಕಿಸ್ತಾನದ ನಿರಾಧಾರ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا