Urdu   /   English   /   Nawayathi

ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ವ್ಯಾಪಾರಸ್ಥ

share with us

ಹೊನ್ನಾವರ: 21 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಹೊನ್ನಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಿನಿ ವಿಧಾನಸೌಧದ ಮುಂದೆ ಬಟ್ಟೆ ಮಾರುತ್ತಿದ್ದವನ ಮೇಲೆ ಟಿಪ್ಪರ್ ಲಾರಿಯೊಂದು ಹತ್ತಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವರದಿಗಳ ಪ್ರಕಾರ ಭಾನುವಾರದಂದು ಬಟ್ಟೆ ವ್ಯಾಪಾರಿ ಮಿನಿ ವಿಧಾನಸೌಧದ ಎದುರಿಗೆ ರಸ್ತೆಯ ಬದಿಯಲ್ಲಿ ತನ್ನ ವ್ಯಾಪಾರ ಮುಗಿಸಿ ರಾತ್ರಿ ಸುಮಾರು 11ಗಂಟೆಗೆ ಮನೆಗೆ ತೆರಳಲು ಸದ್ಧತೆ ನಡೆಸುತ್ತಿದ್ದ. ಅದೇ ವೇಳೆ ಮರಳು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಏಕಾಏಕಿ ನಿಯಂತ್ರಣ ತಪ್ಪಿ ಈತನ ಮೇಲೆ ಹರಿದ ಪರಿಣಾಮ ಈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹಾಗೂ ಪೋಲೀಸರು ಆತನ ರಕ್ಷಿಸಲು ಪ್ರಯತ್ನಪಟ್ಟರೂ ಆತನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. 
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا