Urdu   /   English   /   Nawayathi

ಹುಬ್ಬಳ್ಳಿ ಸ್ಫೋಟ ಪ್ರಕರಣ: ಬಾಂಬ್ ನಿಷ್ಕ್ರಿಯ ದಳದಿಂದ ಕಾರ್ಯಾಚರಣೆ

share with us

ಹುಬ್ಬಳ್ಳಿ: 21 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ನಗರದ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪವಾದ ವಸ್ತುಗಳನ್ನು ಬಯಲು ಪ್ರದೇಶಕ್ಕೆ ಬಾಂಬ್ ನಿಷ್ಕ್ರಿಯ ತಂಡ ಸಾಗಿಸಿದೆ. ರೈಲ್ವೆ ನಿಲ್ದಾಣದಲ್ಲಿ ಬಾಂಬ್ ತರಹದ ವಸ್ತು ಸ್ಫೋಟಗೊಂಡ ಪರಿಣಾಮ ಯುವಕ ಹುಸೇನ್ ನಾಯಕ್​ ಎಂಬುವವರ ಕೈ ಸಂಪೂರ್ಣವಾಗಿ ಛಿದ್ರಗೊಂಡಿದೆ. ಹಾಗಾಗಿ ಘಟನೆ ನಡೆದ ಸ್ಥಳದಲ್ಲಿ ಇದ್ದ 10ಕ್ಕೂ ಹೆಚ್ಚು ಬಾಕ್ಸ್​ಗಳನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಯಲು ಪ್ರದೇಶಕ್ಕೆ ಸಾಗಿಸಿದೆ. ಬಾಕ್ಸ್​ಗಳನ್ನು ರೈಲ್ವೆ ನಿಲ್ದಾಣದ ಬಳಿ ಇರುವ ರೈಲ್ವೆ ಗ್ರೌಂಡ್​ಗೆ ಸಾಗಿಸಲಾಗಿದ್ದು, ಮರಳಿನ ಚೀಲಗಳ ರಾಶಿಯ ಮಧ್ಯೆ ‌ಬಾಕ್ಸ್​ಗಳನ್ನು ತಂದಿಟ್ಟು ಬಾಂಬ್ ತರಹದ ವಸ್ತುಗಳ ತಪಾಸಣೆ ಮುಂದುವರೆಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا