Urdu   /   English   /   Nawayathi

ಚಲಿಸುತ್ತಿದ್ದ ಟಾಟಾ ಏಸ್​ನಲ್ಲಿ ಆಕಸ್ಮಿಕ ಬೆಂಕಿ.. ವಾಹನದಲ್ಲಿದ್ದವರು ಬದುಕಿದ್ದೇ ಪವಾಡ..!

share with us

ಆನೇಕಲ್: 20 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಚಲಿಸುತ್ತಿದ್ದ ಟಾಟಾ ಏಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಆನೇಕಲ್-ತಳಿ ರಸ್ತೆಯಲ್ಲಿ ನಡೆದಿದೆ. ತಮಿಳುನಾಡಿನ ತಳಿಯಿಂದ ಆನೇಕಲ್​ಗೆ ಬರುತ್ತಿದ್ದ ಟಾಟಾ ಏಸ್,​ ಕಾಳನಾಯಕನಹಳ್ಳಿ ಬಳಿ ಬರುತ್ತಿದ್ದಂತೆ ಅದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಶುರುವಾಗಿದೆ. ತಕ್ಷಣ ಎಚ್ಚೆತ್ತ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕೆಳಗಿಳಿದಿದ್ದಾನೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಅದು ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಟಾಟಾ ಏಸ್ ಹೊತ್ತಿ ಉರಿದು ಭಸ್ಮವಾಗಿದೆ. ಚಿಲ್ಲರೆ ಅಂಗಡಿ, ಬೇಕರಿಗಳಿಗೆ ಬ್ರೆಡ್ ಸರಬರಾಜು ಮಾಡುವ ವಾಹನ ಇದಾಗಿದೆ. ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಅಪಾರ ಪ್ರಮಾಣದ ಆಹಾರ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا