Urdu   /   English   /   Nawayathi

ಜನ್ಮ ದಿನಾಚರಣೆ ಸಮಾರಂಭದಲ್ಲಿ ಸ್ನೇಹಿತನಿಂದಲೇ ಸೈನಿಕನ ಬರ್ಬರ ಕೊಲೆ!

share with us

ವರಂಗಲ್​: 20 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಹುಟ್ಟುಹಬ್ಬದ ಸಮಾರಂಭದಲ್ಲೇ ಸೈನಿಕನೋರ್ವನನ್ನು ಬರ್ಬರವಾಗಿ ಕೊಲೆಯಾಗಿರುವ ಘಟನೆ ಇಲ್ಲಿನ ನರ್ಸಂಪೇಟ್​ನಲ್ಲಿ ನಡೆದಿದೆ. ಮೂರು ದಿನದ ಹಿಂದೆ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್​ಕುಮಾರ್​ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಸೆಕೆಂಡ್​ ಶೋ ಚಿತ್ರಕ್ಕೆ ಹೋಗಿದ್ದ ಪ್ರೇಮ್​ಕುಮಾರ್​ಅವರನ್ನು ಮತ್ತೋರ್ವ ಸ್ನೇಹಿತ ರಾಕೇಶ್​ ಫೋನ್​ ಮಾಡಿ ಹುಟ್ಟಹಬ್ಬದ ಸಮಾರಂಭಕ್ಕೆ ಬರುವಂತೆ ಆಹ್ವಾನಿಸಿದ್ದ. ಪ್ರೇಮ್​ಕುಮಾರ್​ ಸಿನಿಮಾ ಅರ್ಧಕ್ಕೆ ಬಿಟ್ಟು ಹುಟ್ಟುಹಬ್ಬದ ಸಮಾರಂಭಕ್ಕೆ ತೆರಳಿದ್ದರು. ಫ್ರೆಂಡ್ಸ್​ ಎಲ್ಲರೂ ಸೇರಿ ರಾಕೇಶ್​ ಬರ್ತ್​ಡೇಯನ್ನು ಪದವಿ ಕಾಲೇಜ್​ ಸಮೀಪ ಆಯೋಜಿಸಿದ್ದರು. ಕೇಕ್​ ಕಟ್​ ಮಾಡಿದ ನಂತರ ಸ್ನೇಹಿತರೆಲ್ಲರೂ ಸೇರಿ ಮದ್ಯ ಸೇವಿಸಿದ್ದರು. ಈ ವೇಳೆ ಪ್ರೇಮ್​ಕುಮಾರ್​ ಜೊತೆ ಸ್ನೇಹಿತ ದಿಲೀಪ್ ಜಗಳ ತೆಗೆದಿದ್ದಾನೆ. ಇವರ ಜಗಳ ವಿಕೋಪಕ್ಕೆ ತಿರುಗಿದೆ. ದಿಲೀಪ್​ ಕುಮಾರ್ ತನ್ನ ಬಳಿಯಿದ್ದ ಚಾಕುವಿನಿಂದ ಮನಬಂದಂತೆ ಪ್ರೇಮ್​ಕುಮಾರ್​ಗೆ ತಿವಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರೇಮ್​ಕುಮಾರ್​ನನ್ನು ಸ್ನೇಹಿತರೆಲ್ಲರೂ ಸೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​ಗೆ ಸಾಗಿಸುತ್ತಿದ್ದಾಗ ವೇಳೆ ಮಾರ್ಗ ಮಧ್ಯೆದಲ್ಲೇ ಪ್ರೇಮ್​ಕುಮಾರ್​ ಸಾವನ್ನಪ್ಪಿದ್ದಾರೆ. ಪ್ರೇಮ್​ಕುಮಾರ್​ ಸಾವಿನ ಸುದ್ದಿ ತಿಳಿದ ಪೋಷಕರಿಗೆ ಸಿಡಿಲು ಬಡಿದಂತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا