Urdu   /   English   /   Nawayathi

ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

share with us

ಭಟ್ಕಳ: 16 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನಾದ್ಯಂತ ಅರಣ್ಯ ಅತಿಕ್ರಮಣ ದಾರರಿಗೆ ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಯಿಂದ ನಿತ್ಯ ಮಾನಸಿಕ, ದೈಹಿಕ ಕಿರುಕುಳ ನೀಡುತಿದ್ದಾರೆ. ಅಂತಹ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅತಿಕ್ರಮಣದಾರರಿಗೆ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರನಾಥ ನಾಯ್ಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ. ತಾಲೂಕಿನಾದ್ಯಂತ ಅರಣ್ಯ ಅತಿಕ್ರಮಣ ದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯಭೂಮಿ ಅವಲಂಬಿಸಿದ್ದಾರೆ. ಅತಿಕ್ರಮಣ ದಾರರು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಅತಿಕ್ರಮಣ ಕ್ಷೇತ್ರಕ್ಕೆ ಜಿಪಿಎಸ್ ಸಹಿತ ಆಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ರಾಜ್ಯ ಸರ್ಕಾರ 2015ರ ಮಾ. 13ರಂದು ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಗಿರುವ ಅರಣ್ಯ ಒತ್ತುವರಿ ಪ್ರಕರಣಗಳಲ್ಲಿ, ಒತ್ತುವರಿ ಭೂಮಿ ಮತ್ತು ಆತನ ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಇರುವ ಒತ್ತುವರಿದಾರರನ್ನು ಮುಂದಿನ ಸೂಚನೆವರೆಗೆ ಒಕ್ಕಲೆಬ್ಬಿಸಬಾರದು ಎಂದು ತಿಳಿಸಿದೆ. 27-04-1978ರ ನಂತರ 3 ಎಕರೆವರೆಗೆ ಅರಣ್ಯ ಒತ್ತುವರಿ ಮಾಡಿರುವಂಥ ಒತ್ತುವರಿದಾರರಿಗೆ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುವುದು ಎಂದು ಅರಣ್ಯವಾಸಿಗಳ ಪರ ನಿರ್ಣಯ ಹೊರಡಿಸಿದೆ. ಕೇಂದ್ರ ಬುಡಕಟ್ಟು ಮಂತ್ರಾಲಯವು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಸಬಾರದೆಂಬ ಆದೇಶ ನೀಡಿದೆ. ಸ್ಥಳೀಯ, ವಲಯ ಮಟ್ಟದ ಕೆಲ ಅಧಿಕಾರಿಗಳು ಕಾನೂನಿಗೆ ವ್ಯತಿರಿಕ್ತವಾಗಿ ಕ್ರಮ ಜರುಗಿಸುತ್ತಿರುವುದು ಖಂಡನೀಯ. ಭಟ್ಕಳ ವ್ಯಾಪ್ತಿಯ ನಗರ ಪ್ರದೇಶ, ಜಾಲಿ, ಬೆಳಕೆ ವ್ಯಾಪ್ತಿಯ ಅರಣ್ಯ ರಕ್ಷಕ, ವಾಚ್​ವುನ್ ಅತಿಕ್ರಮಣ ಸ್ವಾಧೀನದಲ್ಲಿರುವ ಮನೆಗಳಿಗೆ ಏಕಾ ಏಕಿಯಾಗಿ ಅಕ್ರಮ ಪ್ರವೇಶ ಮಾಡಿ ಅತಿಕ್ರಮಣದಾರರ ಸಾಗುವಳಿಗೆ ಆತಂಕ ಉಂಟು ಮಾಡುತ್ತಿದ್ದಾರೆ. ಮಹಿಳೆಯರಿಗೆ ಅವಾಚ್ಯ ಶಬ್ದದಿಂದ ನಿಂದಿಸುತ್ತಿದ್ದಾರೆ. ಈ ರೀತಿ ಮಾಡಲು ಯಾವುದೇ ಕಾನೂನಿನಲ್ಲಿ ಸಿಬ್ಬಂದಿಗೆ ಅವಕಾಶವಿಲ್ಲ. ಅರಣ್ಯ ಸಿಬ್ಬಂದಿಯ ದುರ್ನಡತೆ ಕುರಿತು ಈಗಾಗಲೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ದುರ್ನಡತೆ ತೋರಿದ ಅರಣ್ಯ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅತಿಕ್ರಮಣದಾರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪಿಎಸ್​ಐ ಕುಡಗಂಟಿ ಅವರಿಗೆ ನೀಡಿದ ದೂರಿನಲ್ಲಿ ದಾಖಲಿಸಿದ್ದಾರೆ. ದೇವರಾಜ ಗೊಂಡ, ಪಾಂಡುರಂಗ ನಾಯ್ಕ, ಸೈಯದ್ ಅಲಿ, ಖಯೂಮ್ ಸಾಬ್, ಲಕ್ಷ್ಮೀ ಚಂದ್ರ ಮೊಗೇರ, ಶಾರದಾ ಮೊಗೇರ, ರಿಜ್ವಾನ್, ಕಮಲಾ ಆಚಾರಿ, ನಾಗರತ್ನಾ ಇದ್ದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا