Urdu   /   English   /   Nawayathi

ಎಚ್ಚರಿಕೆಯ ಗಂಟೆ! ಪಾಕಿಸ್ತಾನಕ್ಕಿಂತ ಭಾರತದಲ್ಲೇ ಹಸಿವಿನ ಪ್ರಮಾಣ ಹೆಚ್ಚು!

share with us

ನವದೆಹಲಿ: 16 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ 2014ರಲ್ಲಿ 55ನೇ ಸ್ಥಾನದಲ್ಲಿದ್ದ ಭಾರತ ಐದೇ ವರ್ಷದಲ್ಲಿ ಭಾರಿ ಇಳಿಕೆ ಕಂಡಿದೆ. ಈ ಸೂಚ್ಯಂಕದಲ್ಲಿ ಭಾರತ ತನ್ನ ನೆರೆರಾಷ್ಟ್ರ ಪಾಕಿಸ್ತಾನ(94), ಬಾಂಗ್ಲಾದೇಶ(88), ನೇಪಾಳ(73), ಮ್ಯಾನ್ಮಾರ್(69) ಹಾಗೂ ಶ್ರೀಲಂಕಾ(66) ದೇಶಗಳಿಗಿಂತ ಹಿಂದುಳಿದಿರುವುದು ಈ ವರದಿಯ ಬಹುದೊಡ್ಡ ಅಚ್ಚರಿ..! Welthungerhilfe and Concern Worldwide ತಯಾರಿಸಿರುವ ಈ ವರದಿಯ ಪ್ರಕಾರ, ಹಸಿವಿನ ಪ್ರಮಾಣದ ವಿಚಾರದಲ್ಲಿ ವಿಶ್ವಾದ್ಯಂತ 45 ದೇಶಗಳು ಗಂಭೀರ ಮಟ್ಟದಲ್ಲಿವೆ ಎಂದಿದೆ. ಈ ಪ್ರಮಾಣ ಭಾರತದಲ್ಲೂ ಹೆಚ್ಚಾಗಿದೆ ಎನ್ನುವುದು ವರದಿಯ ಪ್ರಮುಖಾಂಶ.

Global Hunger Index

ಹಸಿವಿನ ಪ್ರಮಾಣದಲಿ ಭಾರತ ಮುಂದು

6 ತಿಂಗಳಿನಿಂದ 23 ತಿಂಗಳ ಅವಧಿಯ ಮಕ್ಕಳಿಗೆ ಕನಿಷ್ಠ ಆಹಾರ ದೊರೆಯುವ ಪ್ರಮಾಣ ಶೇ.96ರಷ್ಟಿದೆ. ಮಕ್ಕಳ ವಯಸ್ಸಿಗೆ ಸಮನಾದ ತೂಕದ ವಿಚಾರದಲ್ಲಿ ಭಾರತ(ಶೇ.20.8) ಉಳಿದೆಲ್ಲಾ ದೇಶಕ್ಕಿಂತ ಹಿಂದುಳಿದೆ ಎಂದು ವರದಿ ಹೇಳಿದೆ. ಮಕ್ಕಳ ಮರಣ ಪ್ರಮಾಣ(ಶೇ.37.9) ಸಹ ಭಾರತದಲ್ಲೇ ಗರಿಷ್ಠ ಮಟ್ಟದಲ್ಲಿದೆ ಎನ್ನುವುದು ತಿಳಿದು ಬಂದಿದೆ. ಸ್ವಚ್ಛ ಭಾರತ ಹಾಗೂ ಪ್ರತಿ ಮನೆಗೂ ಶೌಚಾಲಯ ಎನ್ನುವ ಪರಿಕಲ್ಪನೆಯನ್ನು ಮೋದಿ ಸರ್ಕಾರ ತಂದಿದ್ದರೂ ಬಯಲು ಶೌಚ ಭಾರತದಲ್ಲಿ ಇನ್ನೂ ಜೀವಂತವಾಗಿದೆ ಎಂದು ವರದಿ ಉಲ್ಲೇಖಿಸಿದೆ.

Global Hunger Index

ಜಾಗತಿಕ ಹಸಿವು ಸೂಚ್ಯಂಕ

ಬೆಲಾರಸ್, ಬಲ್ಗೇರಿಯಾ​​ ಚಿಲಿ, ಕ್ರೊವೇಷಿಯಾ, ಕ್ಯೂಬಾ, ಕೋಸ್ಟರಿಕಾ ದೇಶಗಳು ಈ ಸೂಚ್ಯಂಕದಲ್ಲಿ ಅಗ್ರ ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ. ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆ ಕುಂಠಿತ, ಮಕ್ಕಳ ವಯಸ್ಸಿಗೆ ಸಮನಾದ ತೂಕ ಹಾಗೂ ಮಕ್ಕಳ ಮರಣ ಪ್ರಮಾಣ ಎನ್ನುವ ನಾಲ್ಕು ಪ್ರಮುಖ ಅಂಶಗಳನ್ನು ಆಧಾರವಾಗಿರಿಸಿಕೊಂಡು 2019 ಜಾಗತಿಕ ಹಸಿವು ಸೂಚ್ಯಂಕ ವರದಿಯನ್ನು ಸಿದ್ಧಪಡಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا