Urdu   /   English   /   Nawayathi

ಮ್ಯೂಸಿಯಂ ಟಿಕೆಟ್​​ ಹಣದಲ್ಲೂ ವಂಚನೆ: ಐವರ ವಿರುದ್ಧ ಎಫ್​ಐಆರ್

share with us

ಬಿಹಾರ/ಪಾಟ್ನಾ: 16 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಬಿಹಾರದ ವಸ್ತು ಸಂಗ್ರಹಾಲಯದ ಟಿಕೆಟ್​ ಹಣ ದುರಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಮ್ಯೂಸಿಯಂನ ಐವರು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಆಂತರಿಕ ಲೆಕ್ಕ ಪರಿಶೋಧನೆ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಲೆಕ್ಕ ಪರಿಶೋಧನೆ ವೇಳೆ ಮ್ಯೂಸಿಯಂ ಟಿಕೆಟ್​​ನ ಮುದ್ರಣದಲ್ಲಿ ಹಾಗೂ ಮಾರಾಟದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಹೆಚ್ಚುವರಿ ಕಾರ್ಯದರ್ಶಿ ಜಯಪ್ರಕಾಶ್​ ನಾರಾಯಣ ಸಿಂಗ್​, ಮಾಜಿ ಲೆಕ್ಕ ಪರಿಶೋಧನ ಅಧಿಕಾರಿ ಯೋಗೇಂದ್ರ ಪ್ರಸಾದ್​ ಹಾಗೂ ಮೌಮಿತಾ ಘೋಶ್​ ಸೇರಿದಂತೆ ಒಟ್ಟು ಐವರ ವಿರುದ್ಧ ಹಾಲಿ ಲೆಕ್ಕ ಪರಿಶೋಧನಾ ಅಧಿಕಾರಿ ಯೂಸೂಫ್​ ದೂರು ನೀಡಿದ್ದರು. 

ಏನಿದು ಪ್ರಕರಣ: ಮ್ಯೂಸಿಯಂ ಪ್ರವೇಶ ಶುಲ್ಕ 100ರೂ. ಆಗಿದ್ದು, ಟಿಕೆಟ್​ಗಳಿಗೆ ನಂಬರ್ ನಮೂದಿಸರಿಲಿಲ್ಲ. ನಂತರ ಪ್ರತಿ ಟಿಕೆಟ್​ಗೂ ನಂಬರ್​ ನಮೂದಿಸುವುದನ್ನು ಕಡ್ಡಾಯಗೊಳಿಸಿದ ಮೇಲೆ ಆರೋಪಿಗಳು ಒಂದೇ ತರಹದ ಸಂಖ್ಯೆಯುಳ್ಳ ನಾಲ್ಕು ನಕಲಿ ಟಿಕೆಟ್​ಗಳನ್ನ ಮುದ್ರಿಸಿ ಒಂದು ಟಿಕೆಟ್​ ದರವನ್ನು ಮಾತ್ರ ಸಂಗ್ರಹಾಲಯಕ್ಕೆ ಸಲ್ಲಸಿ, ಉಳಿದ ಮೂರು ಟಿಕೆಟ್​ಗಳ ದರವನ್ನು ತಾವೇ ಇರಿಸಿಕೊಳ್ಳುತ್ತಿದ್ದರು ಎಂಬ ಆರೋಪ ಇದಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا