Urdu   /   English   /   Nawayathi

ಭಟ್ಕಳದಲ್ಲಿ ಪ್ರಾಮಾಣಿಕತೆಯ ಪುರಾವೆ ಎತ್ತಿ ತೋರಿದ ಆಟೋ ಚಾಲಕ

share with us

ಭಟ್ಕಳ: 15 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ದಿನನಿತ್ಯ ನಾವು ಪತ್ರಿಕೆಗಳಲ್ಲಿ ಮೋಸ, ವಂಚನೆಗಳಂತಹ ಪ್ರಕರಣಗಳನ್ನು ಓದುತ್ತಿರುತ್ತೇವೆ. ಹಾಗಾಗಿ ಅನಿವಾರ್ಯವಾಗಿ ಅಪರಿಚಿತರನ್ನು ಕಂಡು ಶಂಕಿಸುವುದಲ್ಲದೇ ಅವರನ್ನು ನಂಬುವುದು ಬಹಳ ಕಷ್ಟ. ಆದರೆ ಭಟ್ಕಳದಲ್ಲಿ ನಡೆದ ಪ್ರಾಮಾಣಿಕತೆ ನಿಜವಾಗಿಯೂ ಮೆಚ್ಚಬೇಕಾಗಿದೆ. ಇಂತಹ ಸಂಗತಿಗಳು ಜನರನ್ನು ಬೆರಗುಗೊಳಿಸುವುದಲ್ಲದೇ, ಪ್ರಾಮಾಣಿಕತೆಯ ಪುರಾವೆಗಳನ್ನು ಎತ್ತಿ ತೋರಿಸುತ್ತದೆ. ಹೆಚ್ಚಾಗಿ ಭಟ್ಕಳ ನಗರದಲ್ಲಿ ಯುಗದಿಂದಲೂ ಪ್ರಾಮಾಣಿಕತೆಯ ಸಂಗತಿಗಳು ನಡೆದುಬರುತ್ತಿವೆ. ಪ್ರಯಾಣಿಕರು ವಾಹನಗಳಲ್ಲಿ ತಮ್ಮ ಬೆಲೆಬಾಳುವ ಸಾಮಾಗ್ರಿಗಳನ್ನು ಬಿಟ್ಟು ಪುನಃ ತಮಗೆ ಸಿಗುವ ಭರವಸೆ ಇಲ್ಲದೆ ಕಳೆದುಕೊಂಡ ವಸ್ತುಗಳಿಗಾಗಿ ಪರದಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯೊಂದು ಭಟ್ಕಳ ನಗರದಿಂದ ಬೆಳಕೆ ಗ್ರಾಮಕ್ಕೆ ಆಟೋ ರಿಕ್ಷಾದಲ್ಲಿ ಮನೆಗೆ ತೆರಳಿ, ತನ್ನ ಪರ್ಸೊಂದನ್ನು ಆಟೋರಿಕ್ಷಾದಲ್ಲಿಯೇ ಮರೆತು ಇಳಿದಿದ್ದಾಳೆ. ಪರ್ಸ್ ಕಳೆದುಕೊಂಡು ಪರದಾಡಿದ ಮಹಿಳೆ ಆಟೋ ರಿಕ್ಷಾ ಯಾರದು ಹಾಗೂ ವಾಹನ ಸಂಖ್ಯೆಯನ್ನು ಸರಿಯಾಗಿ ಗಮನಿಸದ ಕಾರಣ ಏನು ಮಾಡುವುದೆಂದು ತೋಚದೇ ಅಸಮಾಧಾನಗೊಂಡಿದ್ದಾಳೆ. ಇತ್ತ ರಿಕ್ಷಾದಲ್ಲಿ ಪರ್ಸ್ ಕಂಡ ಆಟೋ ಚಾಲಕ ಅಣ್ಣಪ್ಪ ಗೊಂಡ ತಕ್ಷಣ ನಗರದ ಪೋಲೀಸ್ ಠಾಣೆಗೆ ತೆರಳಿ ಪರ್ಸನ್ನು ಅಲ್ಲಿದ್ದ ಅಧಿಕಾರಿಗಳಿಗೆ ಒಪ್ಪಿಸಿದನು. ಕಾರ್ಯಾಚರಣೆ ನಡೆಸಿದ ಪೋಲೀಸರು ಸಂಜೆ ವೇಳೆ ಮಹಿಳೆಯ ಮನೆಗೆ ಕರೆ ಮಾಡಿ ಕಳೆದುಕೊಂಡ ಪರ್ಸ್ ತೆಗೆದುಕೊಂಡು ಹೋಗಲು ತಿಳಿಸಿದರು. ಸಂತೋಷಗೊಂಡ ಮಹಿಳೆ ತಕ್ಷಣ ನಗರ ಪೋಲೀಸ್ ಠಾಣೆಗೆ ತಲುಪಿ ತನ್ನ ಪರ್ಸ್ ಪಡೆದುಕೊಂಡಳು. ತನ್ನ ಪರ್ಸಿನಲ್ಲಿದ್ದ ಸುಮಾರು 3ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣವನ್ನು ಕಂಡು ಆಟೋ ಚಾಲಕನಿಗೆ ಕೃತಘ್ನತೆ ಸಲ್ಲಿಸಿದಳು. ಎಲ್ಲಾ ಪೋಲೀಸ್ ಸಿಬ್ಬಂದಿ ಹಾಗೂ ಆ ಮಹಿಳೆಯ ಸಮ್ಮುಖದಲ್ಲಿ ಆಟೋ ಚಾಲಕನನ್ನು ಕರೆಸಿ ಆತನ ಪ್ರಾಮಾಣಿಕತೆಯನ್ನು ಮೆಚ್ಚಿ, ಹೊಗಳಿ ಸನ್ಮಾನಿಸಲಾಯಿತು.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا