Urdu   /   English   /   Nawayathi

ಎಐಸಿಸಿ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದರೂ ಆನ್ ಲೈನ್ ನಲ್ಲಿ ಕಮ್ಮಿಯಾಗಿಲ್ಲ ರಾಹುಲ್ ಗಾಂಧಿ ಹವಾ!

share with us

ಬೆಂಗಳೂರು: 15 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಮೂರು ತಿಂಗಳು ಕಳೆದರೂ ರಾಹುಲ್ ಗಾಂಧಿ ಪ್ರಾಬಲ್ಯ ಮಾತ್ರ ಇನ್ನೂ ಕಮ್ಮಿಯಾಗಿಲ್ಲ,  ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿ ತಮ್ಮ ಹವಾ ಉಳಿಸಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರೂ ಕರ್ನಾಟಕ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ತಮ್ಮ ಪ್ರೊಫೈಲ್ ಪಿಕ್ಚರ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ಮುಖಂಡ ಎಚ್ ಕೆ ಪಾಟೀಲ್, ಅವರುಗಳು ತಮ್ಮ ಟ್ವಿಟ್ಟರ್ ಕವರ್ ಪೇಜ್ ನಲ್ಲಿ  ರಾಹುಲ್ ಗಾಂಧಿ ಫೋಟೋ ಹಾಕಿಕೊಂಡಿದ್ದಾರೆ, ತಮ್ಮ ಫೋಟೋ ಅಥವಾ ಕಾಂಗ್ರೆಸ್ ಪಕ್ಷದ ಲೋಗೋ ಬದಲು ರಾಹುಲ್ ಗೆ ಮಣೆ ಹಾಕಿದ್ದಾರೆ. ಮಾಜಿ ಸಚಿವ ಡಿಕೆ ಶಿವಕುಮಾರ್ ಮತ್ತು ಮಾಜಿ ಡಿಸಿಎಂ ಪರಮೇಶ್ವರ್  ರಾಹುಲ್ ಗಾಂಧಿ ಒಟ್ಟಿಗಿರುವ ಫೋಟೋ ಹಾಕಿಕೊಂಡಿದ್ದಾರೆ.  ಈಶ್ವರ ಖಂಡ್ರೆ ಕೂಡ ರಾಹುಲ್ ಜೊತೆಗಿರುವ ಫೋಟೋ ಅಪ್ ಲೋಡ್ ಮಾಡಿದ್ದಾರೆ. ಇನ್ನೂ ಹಿರಿಯ ಕಾಂಗ್ರೆಸ್ ನಾಯಕರುಗಳಾದ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು, ತಮ್ಮ ಅಧಿಕೃತ ಪೇಜ್ ನಲ್ಲಿ  ಕಾಂಗ್ರೆಸ್ ಪಕ್ಷದ ಲೋಗೋ ಹಾಕಿಕೊಂಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ನಲ್ಲಿ ಸೋನಿಯಾಗಾಂಧಿ ಫೋಟೋ ಇದೆ. ರಾಹುಲ್ ಗಾಂಧಿ ಯಶಸ್ವಿ ನಾಯಕನಾಗದಿದ್ದರೂ ಕಾಂಗ್ರೆಸ್ ಮುಖಂಡರಿಗೆ ಅವರ ಮೇಲಿರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ,  ರಾಹುಲ್ ತಮ್ಮ ನಾಯಕನಾಗಿ ಮುಂದುವರಿಯಬೇಕು ಎಂಬುದು ಹಲವರ ಬಯಕೆಯಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا