Urdu   /   English   /   Nawayathi

ಆಂಧ್ರದ ಪೂರ್ವ ಗೋದಾವರಿಯಲ್ಲಿ ಭೀಕರ ರಸ್ತೆ ಅಪಘಾತ.. ಚಿತ್ರದುರ್ಗ ಮೂಲದ 7 ಮಂದಿ ಸಾವು!

share with us

ಪೂರ್ವ ಗೋದಾವರಿ (ಆಂಧ್ರ ಪ್ರದೇಶ): 15 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಮಾರೆಡುಮಿಲ್ಲಿ-ಚಿಂತೂರ್ ಘಾಟಿ ರಸ್ತೆಯ ವಾಲ್ಮೀಕಿ ಬೆಟ್ಟಕ್ಕೆ ಟೆಂಪೋ ಟ್ರಾವೆಲರ್​​ ಅಪ್ಪಳಿಸಿ ಬಸ್​ ಕಣಿವೆಗೆ ಬಿದ್ದಿದೆ. ಪರಿಣಾಮ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ. ಈವರೆಗೂ ಒಟ್ಟು ಏಳು ಜನ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭಿಸಿದೆ. ಪ್ರವಾಸಿ ಬಸ್​ನಲ್ಲಿ ಹೋಗಿದ್ದವರು ಚಿತ್ರದುರ್ಗ ಮೂಲದವರೆಂದು ತಿಳಿದುಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಹೊರಟಿದ್ದ ಬಸ್​, ಭದ್ರಾಚಲಂನಿಂದ ರಾಜಮಂಡ್ರಿಗೆ ಹೋಗುವ ಮಾರ್ಗ ಮಧ್ಯದ ಮಾರೆಡುಮಿಲ್ಲಿ-ಚಿಂತೂರ್ ಘಾಟಿ ರಸ್ತೆಯ ವಾಲ್ಮೀಕಿ ಬೆಟ್ಟದ ಬಳಿ ಕಣಿವೆಗೆ ಉರುಳಿದೆ. ಟೆಂಪೋ ಟ್ರಾವೆಲರ್​ನಲ್ಲಿ ಒಟ್ಟು 24 ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಇದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನುಳಿದವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا