Urdu   /   English   /   Nawayathi

ಮುಚ್ಚುತ್ತಿದೆ ಬಿಎಸ್ಎನ್ಎಲ್: ವದಂತಿ ಎಂದ ಅಧಿಕಾರಿಗಳು

share with us

ಬೆಂಗಳೂರು: 14 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆ ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್)ನ್ನು ಮುಚ್ಚಲಾಗುತ್ತಿದೆ ಎಂಬುದು ಕೇವಲ ವದಂತಿಯಷ್ಟೇ, ವರದಿಯಲ್ಲಿ ಸತ್ಯಾಂಶಗಳಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬಿಎಸ್ಎನ್ಎಲ್ ಮುಚ್ಚಲಾಗುತ್ತಿದೆ ಎಂಬ ವರದಿಗಳ ಕುರಿತಂತೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಸೇವೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿದ್ದು, ಕೆಲವರು ವೃಥಾ ವದಂತಿಗಳನ್ನು ಹರಡುತ್ತಿದ್ದಾರೆ. ಇಂತಹ ಸುದ್ದಿಗಳಲ್ಲಿ ಯಾವುದೇ ರೀತಿಯ ಸತ್ಯಾಂಶವಿಲ್ಲ. ನಿಗಮವನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸುವುದು ಸರ್ಕಾರದ ತೀವ್ರ ಪರಿಶೀಲನೆಯಲ್ಲಿದೆ ಎಂದು ಬಿಎಸ್ಎನ್ಎಲ್ ನಿಗಮದ ಕರ್ನಾಟಕ ವೃತ್ತದ ಚೀಫ್ ಜನರಲ್ ಮ್ಯಾನೇಜರ್ ಸುಶಿಲ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ದೇಶದಾದ್ಯಂತ ದೂರ ಸಂಪರ್ಕದ ಎಲ್ಲಾ ವೃತ್ತಗಳಲ್ಲಿ ಮತ್ತು ದೂರದ ಸ್ಥಳಗಳಲ್ಲಿ ನಿಗಮವು ಮೊಬೈಲ್ ಸೇವೆಗಳನ್ನು ಒದಗಿಸುತ್ತಿದೆ. ನೈಸರ್ಗಿತ ವಿಪತ್ತು ಸಂದರ್ಭದಲ್ಲಿಯೂ ನಿಗಮವು ಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿದಾಗ 8 ದಿನಗಳ ಕಾಲ ಉಚಿತ ವಾಯ್ಸ್ ಕಾಲ್ ಹಾಗೂ ಇಂಟರ್ನೆಟ್ ಸೇವೆಯನ್ನು ಸಲ್ಲಿಸಿದ ಏಕೈಕ ಆಪರೇಟರ್ ಬಿಎಸ್ಎನ್ಎಲ್'ಗೆ ಆಗಿದೆ ಎಂದಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا