Urdu   /   English   /   Nawayathi

ಒಂದೇ ಬಾರಿ ನಾಲ್ಕು ಹುಲಿಗಳ ದರ್ಶನ...ವಿಕೆಂಡ್​​ನಲ್ಲಿ ಸಫಾರಿ ಪ್ರಿಯರು ಫುಲ್ ಖುಷ್

share with us

ಮೈಸೂರು: 14 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ‌ ಸಫಾರಿ ವಲಯದಲ್ಲಿ ಒಂದೇ ಬಾರಿ ನಾಲ್ಕು ಹುಲಿಗಳು ಕಾಣಿಸಿಕೊಂಡಿದ್ದು, ಸಫಾರಿ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿಸಿವೆ. ಒಂದೇ ಬಾರಿ ನಾಲ್ಕು ಹುಲಿಗಳ ದರ್ಶನ...ವಿಕೆಂಡ್​​ನಲ್ಲಿ ಸಫಾರಿ ಪ್ರಿಯರು ಫುಲ್ ಖುಷ್ ಹೌದು, ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ದಮ್ಮನಕಟ್ಟೆ, ವೀರನಹೊಸಹಳ್ಳಿ, ನಾಣಚ್ಚಿ ಈ ಮೂರು ಕಡೆ ಸಫಾರಿ ವಲಯಗಳಿವೆ. ಆದರೆ, ಈ ಸಫಾರಿ ವಲಯಗಳಲ್ಲಿ ಗುಂಪು ಗುಂಪುಗಳಾಗಿ ಹುಲಿಗಳು ಕಾಣಿಸಿಕೊಳ್ಳುವುದೇ ತೀರ ಅಪರೂಪ. ಕೆಲ ದಿನಗಳ ಹಿಂದೆಯಷ್ಟೇ ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿದ್ದವು. ಇದೀಗ ಮತ್ತೆ ಕಬಿನಿ ಹಿನ್ನೀರು ಪ್ರದೇಶದಲ್ಲಿ ನಾಲ್ಕು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿದ್ದು, ವಿಕೆಂಡ್​​ನಲ್ಲಿ ಸಫಾರಿ ಪ್ರಿಯರಿಗೆ ಸಂತಸವನ್ನುಂಟುಮಾಡಿವೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا