Urdu   /   English   /   Nawayathi

ಹೈದರಾಬಾದ್ ಮೆಟ್ರೋ ನಿಲ್ದಾಣದ ಬಳಿ ಅವಘಡ.. ಸ್ಲಾಬ್​​ ತುಂಡುಗಳು ಬಿದ್ದು ಯುವತಿ ಸಾವು..

share with us

ಹೈದರಾಬಾದ್​​: 23 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಳೆಯಿಂದ ರಕ್ಷಿಸಿಕೊಳ್ಳಲು ರೈಲು ನಿಲ್ದಾಣದ ಬಳಿ ನಿಂತಿದ್ದ ಯುವತಿಯೋರ್ವಳ ತಲೆ ಮೇಲೆ ಸ್ಲಾಬ್​​ ತುಂಡುಗಳು ಬಿದ್ದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಅಮೀರ್‌ಪೆಟ್ ಮೆಟ್ರೋ ನಿಲ್ದಾಣದ ಬಳಿ ಇಂದು ಸಂಜೆ ನಡೆದಿದೆ. ಹೈದರಾಬಾದ್‌ನ ಕೆಪಿಹೆಚ್‌ಬಿಯ ನಿವಾಸಿ ಹಾಗೂ ಟಿಸಿಎಸ್ ಉದ್ಯೋಗಿ ಮೌನಿಕಾ (24) ಮೃತಪಟ್ಟ ಯುವತಿ. 9 ಮೀಟರ್ ಎತ್ತರದಿಂದ ನಿಲ್ದಾಣದ ಮೇಲ್ಮೈ ಗೋಡೆಯ ಹರಿತವಾದ ಗಾರೆ​​ ತುಂಡುಗಳು ಮೌನಿಕಾ ತಲೆ ಮೇಲೆ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಮೌನಿಕಾಳನ್ನು ಎಲ್​ ಆ್ಯಂಡ್​ ಟಿ ಮೆಟ್ರೋ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا