Urdu   /   English   /   Nawayathi

15 ವರ್ಷದ ಬಾಲಕ ಮಾಡಿದ ಅಚಾತುರ್ಯಕ್ಕೆ ಆಟೋ ಚಾಲಕನ ಜೀವವೇ ಹೋಯ್ತು…

share with us

ಬೆಂಗಳೂರು: 22 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅಪ್ರಾಪ್ತನೋರ್ವ ಮಾಡಿದ ಅಪಘಾತಕ್ಕೆ ಓರ್ವ ಆಟೋ ಚಾಲಕನ ಜೀವ ಬಲಿಯಾಗಿದೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಭೂಪಸಂದ್ರ ಬಳಿ ದುರ್ಘಟನೆ ನಡೆದಿದ್ದು 15 ವರ್ಷದ ಬಾಲಕನ ಅಚಾತುರ್ಯವೇ ಕಾರಣ. ಬಾಲಕ ಸ್ವಿಫ್ಟ್​ ಕಾರು ಓಡಿಸುತ್ತಿದ್ದ. ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಆಟೋದಲ್ಲಿ ಚಾಲಕನ ಜತೆ ಇನ್ನೊಬ್ಬರೂ ಇದ್ದರು. ಇಬ್ಬರೂ ಮಧ್ಯಾಹ್ನದ ಊಟ ಮುಗಿಸಿ ಕುಳಿತಿದ್ದರು. ಅವರಲ್ಲಿ ಚಾಲಕ ನಾಗರಾಜ್​ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್.ಟಿ.ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا