Urdu   /   English   /   Nawayathi

ಅನರ್ಹ ಶಾಸಕರ ಸ್ಪರ್ಧೆ ಸಾಧ್ಯವೇ?

share with us

ಬೆಂಗಳೂರು: 22 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸ್ಪೀಕರ್‌ ಆದೇಶದಂತೆ ಅನರ್ಹ ಶಾಸಕರು ಈ ವಿಧಾನ ಸಭೆ ಅವಧಿ ಮುಗಿಯುವವರೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸುಪ್ರೀಂ ವಿಚಾರಣೆ ಬಾಕಿ ಇರುವಾಗ ವೇಳಾಪಟ್ಟಿ ಪ್ರಕಟ ಸರಿಯೇ ಎಂಬ ಪ್ರಶ್ನೆ ಇದೆ. ಇದಕ್ಕೆ ಕಾನೂನು ತಜ್ಞರು ಹೇಳುವುದಿಷ್ಟು.

1. ಸುಪ್ರೀಂ ಮಧ್ಯಪ್ರವೇಶ ಮಾಡಬಹುದು
ಅರ್ಜಿ ಇತ್ಯರ್ಥವಾಗುವವರೆಗೆ ಚುನಾವಣೆ ನಡೆಸಬೇಡಿ ಎಂದು ಅನರ್ಹ ಶಾಸಕರು ಸುಪ್ರೀಂಗೆ ಮನವಿ ಮಾಡಬಹುದು. ಈ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಅವಕಾಶವಿದೆ ಎಂದು ಮಾಜಿ ಅಡ್ವೊಕೇಟ್‌ ಜನರಲ್‌ ಅಶೋಕ ಹಾರನಹಳ್ಳಿ ಅಭಿಪ್ರಾಯಪಡುತ್ತಾರೆ.

2. ಚುನಾವಣೆಗೆ ತಡೆ ಅಸಾಧ್ಯ
ಸಂವಿಧಾನದ ಪರಿಚ್ಛೇದ 329 ಬಿ ಪ್ರಕಾರ ಯಾವುದೇ ಚುನಾವಣೆ ಘೋಷಣೆಯಾದ ಮೇಲೆ ತಡೆ, ಮಧ್ಯಪ್ರವೇಶ ಇಲ್ಲವೇ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಅನರ್ಹ ಶಾಸಕರು ತಮ್ಮ ಗುರಿ ಈಡೇರಿಸಿಕೊಳ್ಳಲು ಪರಿಚ್ಛೇದ 329 ಬಿ ಬಹುದೊಡ್ಡ ಅಡ್ಡಿಯಾಗಲಿದೆ. ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಮತ್ತೂಬ್ಬ ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ| ರವಿವರ್ಮ ಕುಮಾರ್‌ ಹೇಳುತ್ತಾರೆ.

3. ಸೀಮಿತ ಅನುಮತಿ ಕೊಡಬಹುದು
ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ನಿಗದಿ ಪಡಿಸುವ ಅಧಿಕಾರ ವ್ಯಾಪ್ತಿ ಸ್ಪೀಕರ್‌ಗೆ ಇಲ್ಲ, ಹಾಗಾಗಿ ಅನರ್ಹತೆ ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟು ಚುನಾವಣೆಗೆ ಸ್ಪರ್ಧಿಸುವಂತೆ ಅನರ್ಹ ಶಾಸಕರಿಗೆ ಚುನಾವಣಾ ಆಯೋಗ ಸೀಮಿತ ಅನುಮತಿ ಕೊಡಬಹುದು ಎಂದು ಸುಪ್ರೀಂಕೋರ್ಟ್‌ ವಕೀಲ ಕೆ. ಧನಂಜಯ ಹೇಳುತ್ತಾರೆ.

4. ಸ್ಪರ್ಧಿಸಲು ಅಡ್ಡಿ ಇಲ್ಲ
ಸುಪ್ರಿಂಕೋರ್ಟ್‌ನಲ್ಲಿ ಪ್ರಕರಣ ಇದ್ದು, ಸೋಮವಾರ ಅರ್ಜಿ ವಿಚಾರಣೆಗೆ ನಿಗದಿಯಾಗಿರುವಾಗ ಶನಿವಾರ ಅಧಿಸೂಚನೆ ಹೊರಡಿಸಿ ರುವುದು ಸರಿಯಲ್ಲ, ಇದು ಕಾನೂನು ಬಾಹಿರ ಅಲ್ಲದಿದ್ದರೂ ಅಸಮರ್ಪ ಕತೆಯ ಪರಮಾವಧಿ – ಇದು ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ. ಆಚಾರ್ಯ ಅಭಿಪ್ರಾಯ.

5. ತಡೆ ಸಿಗುವ ಸಂಭವ ಇಲ್ಲ
ಚುನಾವಣೆಗೆ ತಡೆ ಸಿಗಲಿಕ್ಕಿಲ್ಲ. ಆದರೆ ಸ್ಪೀಕರ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದರೆ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಸಮಸ್ಯೆ ಎದುರಾಗದು. ಅಷ್ಟಕ್ಕೂ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಏನಾಗುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿವೆ ಎಂದು ಹಿರಿಯ ನ್ಯಾಯವಾದಿ ಎ.ಎಸ್‌. ಪೊನ್ನಣ್ಣ ಹೇಳುತ್ತಾರೆ.

 ರಫೀಕ್‌ ಅಹ್ಮದ್‌

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا