Urdu   /   English   /   Nawayathi

ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ: ದೆಹಲಿ ಸೇರಿದಂತೆ ವಿವಿಧೆಡೆ ಧಾರಣೆಯಲ್ಲಿ ಏರಿಕೆ

share with us

ನವದೆಹಲಿ: 21 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ದಾಸ್ತಾನು ಕೊರತೆಯಿಂದ ದೆಹಲಿಯಲ್ಲಿ ಈರುಳ್ಳಿ ಬೆಲೆ ಕೇಳಿದ್ರೆ ಗ್ರಾಹಕರ ಕಣ್ಣಲ್ಲಿ ನೀರು ಜಿನುಗುತ್ತದೆ. ಜೊತೆಗೆ ಇದನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ದೆಹಲಿಯ ಅಜಾದ್ಪುರ್ ಮಂಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಶುಕ್ರವಾರದ ಒಂದೇ ದಿನ ಪ್ರತಿ ಕೆ.ಜಿ. ಈರುಳ್ಳಿ ಬೆಲೆ ಶೇ 25ರಷ್ಟು ಏರಿಕೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಈರುಳ್ಳಿ ಬೆಳೆಯುವ ರಾಜ್ಯಗಳು ಬೀಕರ ಪ್ರವಾಹ ಉಂಟಾದ ಪರಿಣಾಮ ಉತ್ಪಾದನೆ ಮತ್ತ ದಾಸ್ತಾನು ಅಭಾವ ಸೃಷ್ಟಿಯಾಗಿದೆ. ಹಾಗಾಗಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳ ಎಪಿಎಂಸಿಗಳಲ್ಲಿ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಸಲ್ಗೋನ್​ನಲ್ಲಿ ಪ್ರತಿ ಕೆ.ಜಿ. ಈರುಳ್ಳಿ 15 ರೂ. ಹಾಗೂ ದೆಹಲಿಯಲ್ಲಿ 20-25 ರೂ.ಯ ಮಾರಾಟ ಆಗುತ್ತಿತ್ತು. ದೆಹಲಿಯಲ್ಲಿ ಕಳೆದ ಬುಧವಾರ ಪ್ರತಿ ಕೆ.ಜಿ ಈರುಳ್ಳಿ 20-40, ಗುರುವಾರ 22.50- 50, ಶುಕ್ರವಾರ 10 ದರ ಏರಿಕೆಯ ಮುಖೇನ ಹೆಚ್ಚಳವಾಗುತ್ತಲೇ ಸಾಗಿದೆ. ಇಂದು (ಶನಿವಾರ) 50- 70ರ ದರದಲ್ಲಿ ಮಾರಾಟ ಕಾಣುತ್ತಿದೆ. ಇದನ್ನು ನಿಯಂತ್ರಿಸುವುದು ಇಲ್ಲಿನ ಸರ್ಕಾರಕ್ಕೆ ಸವಾಲಾಗಿದೆ. ಕೇಂದ್ರ ಸರ್ಕಾರ ಪ್ರತಿ ಟನ್​ ಈರುಳ್ಳಿ ರಫ್ತು ಮೇಲೆ ಕನಿಷ್ಠ ರಫ್ತು ದರವನ್ನು (ಎಂಇಪಿ) 850 ಡಾಲರ್​ಗೆ ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸಾಧ್ಯವಿಲ್ಲ ಎಂದು ವಿದೇಶಿ ವಹಿವಾಟು ನಿರ್ದೇಶಕರು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا