Urdu   /   English   /   Nawayathi

15,000 ರೈತರಿಂದ ರಾಷ್ಟ್ರ ರಾಜಧಾನಿಗೆ ಮುತ್ತಿಗೆ: ಬಿಗಿಭದ್ರತೆ

share with us

ದೆಹಲಿ: 21 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ 15,000 ಕ್ಕಿಂತ ಹೆಚ್ಚು ರೈತರು ರಾಷ್ಟ್ರ ರಾಜಧಾನಿಗೆ ಮುತ್ತಿಗೆ ಹಾಕಿದ್ದು ದೆಹಲಿ– ಉತ್ತರಪ್ರದೇಶ ಗಡಿಭಾಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸೆಪ್ಟಂಬರ್ 17 ರಂದು ಉತ್ತರ ಪ್ರದೇಶ ಶಹರಾನ್ ಪುರದಿಂದ, ಭಾರತ್ ಕಿಸಾನ್ ಯುನಿಯನ್ (BKU) ನೇತೃತ್ವದಲ್ಲಿ ಆರಂಭವಾಗಿದ್ದ ಪ್ರತಿಭಟನೆ ಇಂದು ರಾಜಧಾನಿಗೆ ತಲುಪಿದೆ. ಕಬ್ಬು ಬೆಳೆಯ ಬಾಕಿ ಪಾವತಿ, ಸಾಲಮನ್ನಾ, ಗಂಗಾ ನದಿ ಮತ್ತು ಉತ್ತರ ಪ್ರದೇಶದ  ನದಿಗಳ ಸ್ವಚ್ಛತೆ ಮುಂತಾದ ಹಲವು ಬೇಡಿಕೆಗಳ ಈಡೇರಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಶುಕ್ರವಾರ ನೊಯ್ಡಾದಲ್ಲಿನ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮುಂದೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರೂ ಫಲಪ್ರದವಾಗದ ಕಾರಣ ದೆಹಲಿಯ ಕಿಸಾನ್ ಘಾಟ್ ಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಪ್ರಮುಖ ಬೇಡಿಕೆಗಳು:

  • ದೇಶದ ಎಲ್ಲಾ ಕಲುಷಿತ ನದಿಗಳ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು ಮತ್ತು ನದಿಗಳನ್ನು ಮಾಲಿನ್ಯಗೊಳಿಸುವ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
  • ರೈತರ ಎಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. 14 ದಿನಗಳ ನಿಗದಿತ ಸಮಯದಲ್ಲಿ ಕಬ್ಬಿನ ಬಾಕಿ ಪಾವತಿಸಬೇಕು. ಕೊನೆಯ ಬಾಕಿ ಮೊತ್ತವನ್ನು ರೈತರಿಗೆ ಬಡ್ಡಿ ಸಹಿತ ನೀಡಬೇಕು.
  • ಕೃಷಿಗಾಗಿ ಬಳಸುವ ವಿದ್ಯುತ್ ಅನ್ನು ರೈತರಿಗೆ ಉಚಿತವಾಗಿ ನೀಡಬೇಕು.
  • ರೈತ ವಿಮಾ ಯೋಜನೆ ಇಡೀ ಕುಟುಂಬಕ್ಕೆ ವಿಸ್ತಾರವಾಗಬೇಕು.
  • ಸ್ವಾಮಿನಾಥನ್ ವರದಿ ಜಾರಿಗೆ ಬರಬೇಕು.
  • ಉಚಿತ ಶಿಕ್ಷಣ ಮತ್ತು ಉಚಿತ ಔಷಧಿಗಳ ವಿತರಣೆ ದೇಶದಾದ್ಯಂತ ಜಾರಿಗೆ ಬರಬೇಕು.
  • ಭೂಮಿ ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೇ ಶೀಘ್ರ ಇತ್ಯರ್ಥವಾಗಬೇಕು. ಇದರಿಂದ ರೈತರು ಪದೆ ಪದೆ ಕಛೇರಿಗೆ ಅಲೆಯುವುದು ತಪ್ಪುತ್ತದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا