Urdu   /   English   /   Nawayathi

ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಹೆಬ್ಬಾವು ಗಿಫ್ಟ್​ ಎಂದ ಪಾಕ್​ನ ಪಾಪ್​ ಗಾಯಕಿಗೆ ಈಗೇನಾಗಿದೆ ಗೊತ್ತಾ?

share with us

ಇಸ್ಲಾಮಾಬಾದ್​: 15 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಪಾಕಿಸ್ತಾನದಿಂದ ಬರಲಿವೆ ನಾಲ್ಕು ಹೆಬ್ಬಾವುಗಳು ಮತ್ತು ಒಂದು ಮೊಸಳೆಯ ಉಡುಗೊರೆ… ಅವು ನಿನ್ನನ್ನು ಕಬಳಿಸುತ್ತವೆ ನೋಡುತ್ತಿರು ಎಂದು ಪಾಕಿಸ್ತಾನದ ಪಾಪ್​ ಗಾಯಕಿಯೊಬ್ಬರು ಬೆದರಿಕೆ ಹಾಕಿದ್ದಾಳೆ. ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ಈ ಎಚ್ಚರಿಕೆಯ ಸಂದೇಶ ನೀಡಿರುವ ಆಕೆ ಸದ್ಯ ಪಾಕಿಸ್ತಾನದ ಜೈಲು ಸೇರಿದ್ದಾಳೆ! ರಬಿ ಪೀರ್​ಜಾದಾ ಬಂಧನಕ್ಕೆ ಒಳಗಾಗಿರುವ ಪಾಕಿಸ್ತಾನದ ಪಾಪ್​ ಗಾಯಕಿ. ಜೀವಕ್ಕೆ ಅಪಾಯಕಾರಿಯಾದ ಜಂತುಗಳನ್ನು ಅಕ್ರಮವಾಗಿ ಸಾಕುಪ್ರಾಣಿಗಳನ್ನಾಗಿ ಇರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಅಪಾಯಕಾರಿ ಜಂತುಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದ್ದ ಆಕೆ, ನಾನಿ, ಒಬ್ಬ ಕಾಶ್ಮೀರಿ ಯುವತಿ, ಭಾರತವನ್ನು ಹಣಿಯಲು ಹಾವುಗಳೊಂದಿಗೆ ಸಜ್ಜಾಗಿದ್ದೇನೆ… ಈ ಉಡುಗೊರೆಗಳು ವಿಶೇಷವಾಗಿ ಮೋದಿಗಾಗಿ ಮೀಸಲು… ನೀನು ಕಾಶ್ಮೀರಿ ಜನರನ್ನು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಉಡುಗೊರೆಗಳನ್ನು ನಿನಗಾಗಿ ಸಿದ್ಧಪಡಿಸಿದ್ದೇನೆ… ಆದ್ದರಿಂದ, ನರಕದಲ್ಲಿ ಸಾಯಲು ಸಿದ್ಧನಾಗು… ಆಯಿತಾ? ನನ್ನ ಈ ಸ್ನೇಹಿತರು ನಿನ್ನನ್ನು ಆ ನರಕದಲ್ಲಿ ತಿಂದು ತೇಗಲಿವೆ… ಎಂದು ಹೇಳಿದ್ದಳು. ರಬಿ ಪೀರ್​ಜಾದಾಳ ಈ ಎಚ್ಚರಿಕೆಯ ಸಂದೇಶವನ್ನು ಗಮನಿಸಿದ ಪಾಕಿಸ್ತಾನದ ಪಂಜಾಬ್​ ವನ್ಯಜೀವಿಗಳ ರಕ್ಷಣೆ ಮತ್ತು ಉದ್ಯಾನಗಳ ಇಲಾಖೆಯ ಅಧಿಕಾರಿಗಳು ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾದರು. ಆಕೆಯ ಬ್ಯೂಟಿಪಾರ್ಲರ್​ ಮೇಲೆ ದಾಳಿ ಮಾಡಿದ ಅವರು ಅಲ್ಲಿದ್ದ ಹೆಬ್ಬಾವು, ಮತ್ತಿತರ ವಿಷಕಾರಿ ಹಾವುಗಳು ಹಾಗೂ ಮೊಸಳೆಯನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಿದರು. ಜತೆ ಆಕೆಯನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಿದರು ಎನ್ನಲಾಗಿದೆ.

Rabi Pirzada@Rabipirzada

Here u go https://youtu.be/5n_k8F805EI 

 YouTube ‎@YouTube

41

11:23 PM - Sep 5, 2019

Twitter Ads info and privacy

30 people are talking about this

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا