Urdu   /   English   /   Nawayathi

ಚೀನಾದಲ್ಲಿ ಭಾರಿ ಮಳೆ: ಪ್ರವಾಸಿಗರಿಗೆ 'ಮೌಂಟ್ ಹುವಾಶಾನ್' ಬಂದ್

share with us

ಶಿಯಾನ್ (ಕ್ಷಿನುಹಾ): 15 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಚೀನಾದಲ್ಲಿ ಧಾರಾಕಾರ ಮಳೆಯಿಂದಾಗಿ ವಾಯವ್ಯ ಪ್ರಾಂತ್ಯದ ಶಾಂಶಿಯ ಪ್ರವಾಸಿ ತಾಣ 'ಮೌಂಟ್ ಹುವಾಶನ್' ಗೆ ಪ್ರವಾಸಿಗರ ಭೇಟಿಯನ್ನು ಭಾನುವಾರ ಮಧ್ಯಾಹ್ನದಿಂದ ನಿಷೇಧಿಸಲಾಗಿದೆ. ಶನಿವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ರವಿವಾರ ಬೆಳಗ್ಗೆ 9 ಗಂಟೆಯವರೆಗೆ 60 ಮಿ.ಮೀ ಮಳೆಯಾಗಿದ್ದು ಪರ್ವತಾರೋಹಣ ನಿರ್ಬಂಧಿಸಲಾಗಿದೆ ಎಂದು ಮೌಂಟ್ ಹುವಾಶಾನ್‌ ನಿರ್ವಹಣಾ ಸಮಿತಿ ತಿಳಿಸಿದೆ. ಸ್ಥಳೀಯ ಹವಾಮಾನ ಇಲಾಖೆ ಅನುಸಾರ, ಗುರುವಾರದವರೆಗೂ ಮಳೆ ಮುಂದುವರಿಯಲಿದ್ದು, ಇದರಿಂದಾಗಿ ಭೂಕುಸಿತ ಮತ್ತು ಮಣ್ಣು ಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا