Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಶಿವಮೊಗ್ಗ: 25 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಉತ್ತರ ಕರ್ನಾಟಕ ಮತ್ತು ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಉಂಟಾದ ಹಿನ್ನೆಲೆ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಇದರ ಪರಿಣಾಮ ಕರ್ನಾಟಕದ ಕೆಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದೆ. ಪ್ರವಾಹ ಬರುವ ಮುನ್ನ ಈರುಳ್ಳಿ ಬೆಲೆ ಕೆಜಿಗೆ 15 ರೂ. ಇತ್ತು. ಆದ್ರೀಗ 30ರಿಂದ 40 ರೂ.ಗೆ ಏರಿದೆ. ನಾವು ಮಹಾರಾಷ್ಟ್ರದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಅಲ್ಲದೇ ಇಲ್ಲಿ ಬೆಳೆದ ಈರುಳ್ಳಿಯನ್ನು ಸಹ ಮಾರಾಟ ಮಾಡುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಬಂದ ಮಳೆಯಿಂದ ರಸ್ತೆಗಳಿಗೆ ಹಾನಿಯಾಗಿದ್ದು, ಇದು ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ವ್ಯಾಪಾರಿ ಸುಬ್ರಮಣಿ ಎಂಬುವರು ಹೇಳುತ್ತಾರೆ. ಪುಣೆಯಿಂದ ಬರುವಂತಹ ಟ್ರಕ್ಗಳು ಪ್ರಮುಖ ನಗರಗಳಲ್ಲಿ ಸಿಲುಕಿಕೊಂಡಿವೆ. ಹಾಗಾಗಿ ತಾಜಾ ಸರಕುಗಳಿಗಾಗಿ ಮಾರಾಟಗಾರರು ಕಾಯುತ್ತಿದ್ದಾರೆ. ಅಲ್ಲದೇ ದೊಡ್ಡ ವ್ಯಾಪಾರಸ್ಥ ಸಂಸ್ಥೆಗಳಾದ ಪುಣೆಯ ಮೌರ್ಯ ಎಕ್ಸ್ಪೊರ್ಟ್, ಬಿಎಲ್ಎಸ್ ಮೂರ್ತಿ ಮತ್ತು ಬೆಂಗಳೂರಿನ ನಾಗಪ್ಪ ಚೆಟ್ಟಿ ಸಂಸ್ಥೆಗಳು ಕೂಡ ಭಯದಲ್ಲಿವೆ. ಈರುಳ್ಳಿಯ ಬೆಲೆ ಈ ರೀತಿ ಏರುತ್ತಿದ್ದರೆ ಸಾಮಾನ್ಯ ಜನರು ಮನೆ ನಡೆಸಲು ಕಷ್ಟವಾಗುತ್ತೆ. ಈಗಾಗಲೇ ಬೆಲೆ 40 ರೂ.ಗೆ ಏರಿದೆ. ಇದು ಹೀಗೆಯೇ ಮುಂದುವರೆದ್ರೆ ಜನರಿಗೆ ಹೊರೆಯಾಗಲಿದೆ ಎಂದು ಗೃಹಿಣಿ ರಾಂಚಿತ ಹೇಳಿದ್ದಾರೆ. ಅಲ್ಲದೇ ಹಬ್ಬದ ಸಮಯದಲ್ಲಿ ಈರುಳ್ಳಿ ಬೆಲೆ 60 ರೂ. ಆಗಬಹುದೆಂದು ವ್ಯಾಪರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ, ಇ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |