Urdu   /   English   /   Nawayathi

ತಪ್ಪಿದ ದುರಂತ! ಅಬ್ಬಿ ಜಲಪಾತದಲ್ಲಿ ನೀರುಪಾಲಾಗುತ್ತಿದ್ದ ಯುವಕನನ್ನು ರಕ್ಷಿಸಿದ ಗ್ರಾಮಸ್ಥರು

share with us

ಶಿವಮೊಗ್ಗ: 25 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಜಲಪಾತದ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಗ್ರಾಮಸ್ಥರೇ ಸೇರಿ ರಕ್ಷಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ನಡೆದಿದೆ. ಹೊಸನಗರದ ಯಡೂರು ಸಮೀಪದ ಅಬ್ಬಿ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ 27 ವರ್ಷದ ಪ್ರವಾಸಿ ಯುವಕನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಪ್ರಾಣಾಪಾಯದಿಂದ ಪಾರಾದ ಯುವಕನನ್ನು ನಿಖಿಲ್ ಎಂದು ಗುರುತಿಸಲಾಗಿದೆ. ಆತ ತನ್ನ ಕುಟುಂಬ, ಸ್ನೇಹಿತರೊಡನೆ ಜಲಪಾತದ ಸುಂದರ ದೃಶ್ಯವನ್ನು ಸವಿಯಲು ಆಗಮಿಸಿದ್ದನು. ಶರತ್ಕಾಲದ ಮಳೆಯ ಕಾರಣ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಿತ್ತು. ಆವೇಳೆ ನೀರಿನ ಸಮೀಪವಿದ್ದಾಗಲೇ ದೊಡ್ಡ ಪ್ರಮಾಣದ ನೀರು ರಭಸದಿಂದ ಹರಿದು ಯುವಕ ಕೊಚ್ಚಿ ಹೋಗುತ್ತಿದ್ದ. ಆಗ ಉಳಿದವರು ನೀರಿನ ಸೆಲವಿನಿಂಡ ಬಿಡಿಸಿಕೊಂಡರೆ ನಿಳಿಲ್ ಗೆ ಸಾಧ್ಯವಾಗಿರಲಿಲ್ಲ. ಆಗ ಅವನ ಕುಟುಂಬ ಸಹಾಯಕ್ಕಾಗಿ ಮೊರೆ ಇಟ್ಟಿದೆ. ಪ್ರವಾಸಿಗರು ಕಿರುಚುತ್ತಿರುವುದನ್ನು ಕೇಳಿದ ಗ್ರಾಮಸ್ಥರು ಹಗ್ಗಗಳೊಡನೆ ಸ್ಥಳಕ್ಕೆ ಧಾವಿಸಿನಾಲ್ಕು ಯುವಕರು ತಮ್ಮ ಸುತ್ತಲೂ ಹಗ್ಗವನ್ನು ಕಟ್ಟಿ ನಿಖಿಲ್ನನ್ನು ಉಳಿಸಲು ಪ್ರಪಾತದ ಕೆಳಗಿಳಿದರು.ಮತ್ತು ಅವರು ಅವನನ್ನು ತಲುಪುವಲ್ಲಿ ಯಶಸ್ವಿಯಾದರು. ಆಗ ಹಗ್ಗವನ್ನು ಬಂಡೆಯೊಂದಕ್ಕೆ ಕಟ್ಟಿ ಯುವಕನನ್ನು ಮೇಲೆತ್ತಲು ಯಶಸ್ವಿಯಾದರು. ಬೆಂಗಳೂರಿನಿಂದ ಬಂದ ಎಲ್ಲಾ 12 ಪ್ರವಾಸಿಗರು ಗ್ರಾಮಸ್ಥರಿಗೆ ಧನ್ಯವಾದ ಹೇಳಿ ಹಿಂದಿರುಗಿದರು.ಕುಟುಂಬದ ಐವರು ಸದಸ್ಯರು ಜಲಪಾತದಿಂದ ಹೊರಬರಲು ಸಾಧ್ಯವಾಗದ ಕಾರಣ ಭಯಭೀತರಾಗಿದ್ದರು.ನಿಖಿಲ್ ಒಂದು ಗಂಟೆಗೆ ಹೆಚ್ಚು ಕಾಲ ನೀರಿನ ಸೆಳವಿನಲ್ಲಿ ಸಿಕ್ಕಿದ್ದ.  ಆತ ಸಂಪೂರ್ಣ ನೀರಿನಲ್ಲಿದ್ದ ಕಾರಣ ಆತನಿಗೆ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ನಾವು ಅವನನ್ನು ಸುರಕ್ಷಿತವಾಗಿ ಕರೆತರಲು ಅವನ ಸೊಂಟದ ಉದ್ದಕ್ಕೂ ಹಗ್ಗವನ್ನು ಬಿಗಿಯಾಗಿ ಕಟ್ಟುವಂತೆ ಕೇಳಿದೆವು. ನಮ್ಮಲ್ಲಿ ಕೆಲವರು ಕೊನೆಯವರೆಗೂ ಹಗ್ಗವನ್ನು ಹಿಡಿದು ನಿಖಿಲ್ ಅವರನ್ನು ಎಳೆದರು ”ಎಂದು ಯಡೂರು ಗ್ರಾಮದ ಗ್ರಾಮಸ್ಥ ವೀರೇಶ್ ಹೇಳಿದರು. ಅಬ್ಬಿ ಜಲಪಾತವು ಮಳೆಗಾಲದಲ್ಲಿ ಸುಮಾರು 200 ಮೀಟರ್ ಆಳಕ್ಕೆ ಧುಮ್ಮಿಕ್ಕುತ್ತದೆ.ಅತಿಯಾದ ಮಳೆಯಾಗುತ್ತಿರುವುದರಿಂದ ಪ್ರವಾಸಿಗರು ಅಲಪಾತದ ಕೆಳಗಿಳಿಯುವುದು ಅಪಾಯಕಾರಿಯಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا