Urdu   /   English   /   Nawayathi

ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ಭೂಕಬಳಿಕೆ; ಅಧಿಕಾರಿಗಳು ಶಾಮೀಲು

share with us

ಹಾಸನ: 25 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮಲೆನಾಡು ಸೇರಿದಂತೆ ಬಯಲು ಸೀಮೆಯ ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿರುವ ಹೇಮೆಯ ಒಡಲಿನಿಂದ, ಈಗ ಭೂ ಕಬಳಿಕೆಯ ಕಮಟು ವಾಸನೆ ಜೋರಾಗಿ ಹೊರಸೂಸುತ್ತಿದೆ. ಹೇಮಾವತಿ ಜಲಾಶಯ ಯೋಜನೆ ಗಾಗಿ ಭೂಮಿ ಕಳೆದುಕೊಂಡರ ಹೆಸರಿನಲ್ಲಿರುವ ‘ಮುಳುಗಡೆ ಸಂತ್ರಸ್ತರ ಪ್ರಮಾಣಪತ್ರ’ ಬಳಸಿ, ಉಳ್ಳವರು ಭೂಮಿಯನ್ನು ಕಬಳಿಸುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ. ಈ ಯೋಜನೆಗಾಗಿ 1970–71ರಲ್ಲಿ ಆಲೂರು, ಸಕಲೇಶಪುರ, ಹಾಸನದ ರೈತರು ಭೂಮಿ ಕಳೆದುಕೊಂಡಿದ್ದರು. ಇವರಿಗೆ ಸೋಮವಾರಪೇಟೆ, ಚಿಕ್ಕಮಗಳೂರು, ಆಲೂರು, ಸಕಲೇಶಪುರ, ಅರಕಲಗೂಡು, ಹಾಸನ, ಚನ್ನರಾಯಪಟ್ಟಣ, ಕೆ.ಆರ್‌.ಪೇಟೆ ತಾಲ್ಲೂಕುಗಳಲ್ಲಿ ಬದಲಿ ಭೂಮಿಯನ್ನು ಮೀಸಲು ಇಡಲಾಗಿತ್ತು. ಸಂತ್ರಸ್ತರ ಮುಳುಗಡೆ ಪ್ರಮಾಣಪತ್ರಗಳನ್ನು ಉಳ್ಳವರು ಖರೀದಿಸಿ, ಭೂಮಿ ಕಬಳಿಸಿದ್ದಾರೆ. ಅಷ್ಟೇ ಅಲ್ಲ; 40 ವರ್ಷದ ಹಿಂದೆ ಭೂಮಿ ಕಳೆದುಕೊಂಡ ಸಂತ್ರಸ್ತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಸಂತ್ರಸ್ತರಿಗೆ ಅಲ್ಪ ಆರ್ಥಿಕ ಪರಿಹಾರ ಮತ್ತು ಒಂದು ಮುಳುಗಡೆ ಪ್ರಮಾಣ ಪತ್ರಕ್ಕೆ ನಾಲ್ಕು ಎಕರೆ ಬದಲಿ ಭೂಮಿ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا