Urdu   /   English   /   Nawayathi

ಮಣಿಪಾಲ: ಹೆದ್ದಾರಿ ಬದಿ ಮಣ್ಣು ಕುಸಿತ; ಆತಂಕ

share with us

ಉಡುಪಿ: 22 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎಯ ಮಣಿಪಾಲ ಲಕ್ಷ್ಮೀಂದ್ರನಗರದ ಚಿತ್ರಮಂದಿರ ಎದುರಿನ ಭಾಗದಲ್ಲಿ ಸಿಂಡಿಕೇಟ್‌ ಸರ್ಕಲ್‌ನಿಂದ ಕೆಳಕ್ಕೆ ಬರುವಲ್ಲಿ ಗುಡ್ಡದ ಮಣ್ಣು ಕುಸಿದು ವಾಹನ ಚಾಲಕರಲ್ಲಿ ಆತಂಕ ಮೂಡಿದೆ. ಬುಧವಾರ ಸಂಜೆ ವೇಳೆ ಮಣ್ಣು ಕುಸಿದು ಚರಂಡಿಗೆ ಬಿದ್ದಿದೆ. ಈ ಗುಡ್ಡದಲ್ಲಿ ಮರಗಳು ಕೂಡ ಇವೆ. ಸ್ವಲ್ಪ ದೂರದಲ್ಲೇ ಕಟ್ಟಡಗಳೂ ಇವೆ. ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಪ್ರದೇಶ ಅಪಾಯಕಾರಿಯಾಗಿದೆ. ಮಣ್ಣು ಮರ ಸಮೇತ ವಾಹನಗಳ ಮೇಲೆ ಬೀಳುವ ಅಪಾಯವಿದೆ. ಅಲ್ಲದೆ ಮಳೆನೀರು ಚರಂಡಿ ಬ್ಲಾಕ್‌ ಆಗಿ ಮಳೆ ನೀರು ರಸ್ತೆ ಮೇಲೆ ಪ್ರವಹಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.

“ವಿಸ್ತಾರಗೊಳ್ಳಲಿದೆ’
“ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು ಈ ಭಾಗದಲ್ಲಿ ಇನ್ನೂ ಕೂಡ ಎರಡು ಬದಿಗೆ ರಸ್ತೆ ವಿಸ್ತಾರಗೊಳ್ಳಲಿದೆ. ಗುಡ್ಡ ಇರುವ ಭಾಗದಲ್ಲಿ ಸುಮಾರು 6 ಮೀಟರ್‌ನಷ್ಟು ಅಗಲಕ್ಕೆ ವಿಸ್ತಾರಗೊಳ್ಳಲಿದೆ. ಭೂ ಸ್ವಾಧೀನ ನಡೆಸಿ ವಿಸ್ತರಿಸಲಾಗುವುದು. ಮಣ್ಣು ಕುಸಿದ ಪ್ರದೇಶವನ್ನು ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا