Urdu   /   English   /   Nawayathi

ಅಮಾಯಕರ ತೇಜೋವಧೆ ಸಲ್ಲ

share with us

ಮಂಗಳೂರು: 21 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆದರೆ ಅಮಾಯಕರನ್ನು ಆರೋಪಿಗಳಂತೆ ಬಿಂಬಿಸಿ ತೇಜೋವಧೆ ಮಾಡುವುದು ಸರಿಯಲ್ಲ. ಎನ್‌ಐಎ ಬಗ್ಗೆ ಅಪಾರ ಗೌರವ ಇದೆ. ಹಾಗೆಂದು, ಎನ್‌ಐಎ ತನಿಖೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಬೇಕಾಬಿಟ್ಟಿ ಸುದ್ದಿ ಹರಡುವ ಕಾರಣ ಜಿಲ್ಲೆಯ ಜನತೆ ಆತಂಕ್ಕೀಡಾಗಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು. ವಿದೇಶದಿಂದ ಸ್ಯಾಟಲೈಟ್ ಫೋನ್ ಕರೆ ಸಂಬಂಧಿಸಿ ಬೆಳ್ತಂಗಡಿಯ ಅಮಾಯಕ ವ್ಯಕ್ತಿಯ ಬಗ್ಗೆ ಆರೋಪ ವ್ಯಕ್ತವಾಗಿದೆ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌ಐಎ ತಂಡ ಬಂದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಸೆಟಲೈಟ್ ಫೋನ್ ಕರೆ ಪ್ರಕರಣ ನಡೆದಿದ್ದರೆ ಆ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಥವಾ ರಾಜ್ಯ ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು, ಕಾಂಗ್ರೆಸ್ ನಾಯಕರಾದ ಈಶ್ವರ್ ಉಳ್ಳಾಲ್, ಸದಾಶಿವ ಉಳ್ಳಾಲ್, ಆರೋಪಕ್ಕೆ ಒಳಗಾದ ರವೂಫ್ ಉಪಸ್ಥಿತರಿದ್ದರು.

ಅಮಾಯಕರಿಗೆ ತೊಂದರೆ
ಸ್ಯಾಟಲೈಟ್ ಫೋನ್ ಕರೆ ವಿಚಾರದಲ್ಲಿ ಬೆಳ್ತಂಗಡಿ ಗೋವಿಂದೂರು ನಿವಾಸಿ ರವೂಫ್ ಎಂಬುವರನ್ನು ಆರೋಪಿಯಂತೆ ಬಿಂಬಿಸಲಾಗಿದೆ. ರವೂಫ್ 10 ವರ್ಷದಿಂದ ನನಗೆ ಪರಿಚಿತರು. ಅವರು ಗೋವಿಂದೂರಿನಲ್ಲಿ ಸಾಲ ಮಾಡಿ ಮನೆ ನಿರ್ಮಿಸುತ್ತಿದ್ದಾರೆ. ಆದರೆ ಸತ್ಯಾಂಶ ಮರೆಮಾಚಿ ವಿದೇಶದಿಂದ ಕರೆ ಬಂದಿದೆ ಎಂಬ ರೀತಿ ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸಲಾಗಿದೆ. ಇದರಿಂದ ಪೊಲೀಸ್ ಇಲಾಖೆ ಕೂಡ ಅವರಿಗೆ ತೊಂದರೆ ನೀಡುತ್ತಿದೆ. ಈ ಬಗ್ಗೆ ರವೂಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮೌಖಿಕ ದೂರು ನೀಡಿದ್ದಾರೆ ಎಂದು ಖಾದರ್ ಹೇಳಿದರು.

ನಾನು ಯಾವುದೇ ತಪ್ಪು ಎಸಗಿಲ್ಲ. ಈಗ ವಿನಾಕಾರಣ ಆರೋಪಿಯಾಗಿ ಬಿಂಬಿಸಿದ್ದು ನನಗೆ ಆಘಾತ ನೀಡಿದೆ. ಕುಟುಂಬಸ್ಥರಲ್ಲಿಯೂ ಭೀತಿ ಮೂಡಿದೆ. ನನ್ನನ್ನು ಯಾವ ತನಿಖಾ ತಂಡವೂ ವಿಚಾರಣೆ ನಡೆಸಿಲ್ಲ. ನಾನು ಮಂಜನಾಡಿಯ ಅಲ್ ಮದೀನಾ ಸಂಸ್ಥೆಯಲ್ಲಿ ಸಹಾಯಕ ಧರ್ಮಗುರುವಾಗಿ 16 ವರ್ಷದಿಂದ ದುಡಿಯುತ್ತಿದ್ದೇನೆ.
– ರವೂಫ್, ಆರೋಪಕ್ಕೆ ಒಳಗಾದವರು.

 ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا