Urdu   /   English   /   Nawayathi

ಹೀಗೊಂದು ವಿಚಿತ್ರ ರ್‍ಯಾಗಿಂಗ್... ತಲೆ ಬೋಳಿಸಿಕೊಂಡ ನೂರಕ್ಕೂ ಅಧಿಕ ಸ್ಟೂಡೆಂಟ್ಸ್..!

share with us

ಸೈಫೈ(ಉತ್ತರ ಪ್ರದೇಶ): 21 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ರ್‍ಯಾಗಿಂಗ್ ಪರಿಣಾಮ ಮೊದಲ ವರ್ಷದ ಸುಮಾರು 150 ಮೆಡಿಕಲ್​ ವಿದ್ಯಾರ್ಥಿಗಳು ತಲೆ ಬೋಳಿಸಿಕೊಂಡ ಘಟನೆ ಉತ್ತರ ಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ. ​ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಲೆ ಬೋಳಿಸುವಂತೆ ರ್‍ಯಾಗಿಂಗ್ ಮಾಡಿದ್ದು, ಸದ್ಯ ಈ ರ್‍ಯಾಗಿಂಗ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವೈರಲ್ ಆದ ವಿಡಿಯೋಗೆ ಸಂಬಂಧಿಸಿದಂತೆ ವಿವಿಯ ಉಪ ಕುಲಪತಿ ಡಾ.ರಾಜ್​ಕುಮಾರ್ ಪ್ರತಿಕ್ರಿಯೆ ನೀಡಿದ್ದು, ರ್‍ಯಾಗಿಂಗ್ ಕುರಿತಾಗಿ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿದ್ದು, ತಂಡ ಈ ಪ್ರಕ್ರಿಯೆಗಳ ಮೇಲೆ ಕಣ್ಣಿಟ್ಟಿದೆ ಎಂದಿದ್ದಾರೆ.

ಒಂದು ವಿಡಿಯೋದಲ್ಲಿ ಸುಮಾರು ನೂರಕ್ಕೂ ಅಧಿಕ ಮೆಡಿಕಲ್​ ವಿದ್ಯಾರ್ಥಿಗಳು ತಮ್ಮ ಬಿಳಿ ಸಮವಸ್ತ್ರದ ಧರಿಸಿ ಬೋಳು ತಲೆಯಲ್ಲಿ ಸಾಗುತ್ತಿರುವ ದೃಶ್ಯವಿದೆ. ಎರಡನೇ ವಿಡಿಯೋದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಸೆಲ್ಯೂಟ್ ಮಾಡುವ ದೃಶ್ಯ ಸೆರೆಯಾಗಿದೆ. ಮೂರನೇ ದೃಶ್ಯದಲ್ಲಿ ಸೆಕ್ಯುರಿಟಿ ಗಾರ್ಡ್ ಸಹ ಇದ್ದು, ಆದರೆ ರ್‍ಯಾಗಿಂಗ್​ಗೆ ತಡೆಯುವ ಯಾವುದೇ ಪ್ರಯತ್ನ ಮಾಡಿಲ್ಲ. ಸದ್ಯ ವಿಡಿಯೋ ಎಲ್ಲಡೆ ವೈರಲ್ ಆಗಿದ್ದು ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿವಿಯ ಉಪಕುಲಪತಿ ಡಾ.ರಾಜ್​ಕುಮಾರ್ ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا