Urdu   /   English   /   Nawayathi

ಕಾಶ್ಮೀರ ಕಣಿವೆಗೆ ಹಿಂದೂ-ಮುಸ್ಲಿಂ ಲೇಪನ.. ಕೋಮು ದ್ವೇಷಕ್ಕೆ ಟ್ರಂಪ್​​ ಕಿಡಿ ಹಚ್ಚಿದರಾ?

share with us

ನವದೆಹಲಿ: 21 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಅಮೆರಿಕ ಪ್ರವಾಸದ ಸನಿಹದಲ್ಲಿರುವ ಪ್ರಧಾನಿ ನರೇಂದ್ರ ಮೋದಿ. ಕಾಶ್ಮೀರದ 370 ವಿಧಿಯನ್ನು ವಿಶ್ವ ಸಂಸ್ಥೆ ಅಂಗಳಕ್ಕೆ ಕೊಂಡೊಯ್ದ ಪಾಕ್​. ಮಧ್ಯಸ್ಥಿಕೆಯಿಂದ ದೂರವಿರುವುದಾಗಿ ಹೇಳುತ್ತಲ್ಲೇ ಅಗತ್ಯವಿದ್ದರೆ ಪಾಲುದಾರ ಆಗುವುದಾಗಿ ಹೇಳಿಕೆ ಕೊಟ್ಟ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಒಂದು ಹೆಜ್ಜೆ ಮುಂದೆ ಹೋಗಿ 'ಕಾಶ್ಮೀರವನ್ನು ಹಿಂದೂ- ಮುಸ್ಲಿಂ ಧರ್ಮಗಳ ಒಗ್ಗೂಡಿದ ಸಂಕೀರ್ಣ ವಿಷಯ' ಎಂದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕಾಶ್ಮೀರದ ವಿವಾದವನ್ನು ಜಾಗತಿಕ ಮಟ್ಟದಲ್ಲಿ ಧರ್ಮದ ವ್ಯಾಪ್ತಿಗೆ ಮೊದಲ ಬಾರಿಗೆ ತಂದವರು ಟ್ರಂಪ್​. ಈ ಹಿಂದೆಯೂ ಕಣಿವೆ ರಾಜ್ಯದ ವಿವಾದವನ್ನು ಎರಡು ರಾಷ್ಟ್ರಗಳ ನಡುವಿನ ಗಡಿ ಸಮಸ್ಯೆ ಎಂದು ವ್ಯಾಖ್ಯಾನ ಮಾಡಿದ್ದ ಬಹುತೇಕ ರಾಷ್ಟ್ರಗಳ ಮುಖಂಡರು, ಹಿಂದೂ-ಮುಸ್ಲಿಮರ ಧಾರ್ಮಿಕ ಚೌಕಟ್ಟಿಗೆ ಸೇರಿಸುವ ಸಾಹಸ ಮಾಡಿರಲಿಲ್ಲ. ಮೊದಲ ಬಾರಿಗೆ ಟ್ರಂಪ್​ ಅದನ್ನು ಮಾಡಿದ್ದಾರೆ. ಇದೊಂದು ಸಂಕೀರ್ಣವಾದ ಪರಿಸ್ಥಿತಿಯಲ್ಲಿದೆ. ಇದು ಧರ್ಮದೊಂದಿಗೆ ಬಹಳಷ್ಟು ಸಂಬಂಧವಿದೆ. ಧರ್ಮವು ಒಂದು ಸಂಕೀರ್ಣ ವಿಷಯವಾಗಿದೆ. ಕಾಶ್ಮೀರ ಅತ್ಯಂತ ಸಂಕೀರ್ಣವಾದ ಸ್ಥಳ ಎಂದು ಹೇಳಿಕೆ ನೀಡಿದ್ದಾರೆ. ಉಪಖಂಡವು ನೂರಾರು ವರ್ಷಗಳಿಂದ ಮಾತುಕತೆಯ ಹಂತದಲ್ಲಿ ಸಾಗುತ್ತಿದೆ. ನೀವು ಹಿಂದೂಗಳನ್ನು ಹೊಂದಿದ್ದೀರಿ ಮತ್ತು ಅವರು ಮುಸ್ಲಿಮರನ್ನು ಹೊಂದಿದ್ದೀರಿ. ಅವರು ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಂದು ನಾನು ಹೇಳುವುದಿಲ್ಲ. ಅದನ್ನೇ, ಈಗ ನೀವು ಹೊಂದಿದ್ದೀರಿ. ಉಭಯ ರಾಷ್ಟ್ರಗಳು ದೀರ್ಘಕಾಲದವರೆಗೆ ಜತೆಯಾಗಿ ಹೊಂದಿಕೊಂಡು ಹೋಗುತ್ತಿಲ್ಲ'ವೆಂಬ ಟ್ರಂಪ್​ ಅವರ ಈ ಹೇಳಿಕೆ ಭವಿಷ್ಯದಲ್ಲಿ ಮುಸ್ಲಿಂ ರಾಷ್ಟ್ರಗಳು ಮತ್ತು ಭಾರತದ ಸಂಬಂಧ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಟ್ರಂಪ್​ ತಮ್ಮ ಧರ್ಮದ ಹೇಳಿಕೆಯ ಮೂಲಕ ಯುಎಇ, ಸೌದಿ ಅರೇಬಿಯಾ ಸೇರಿದಂತೆ ಇತರೆ ಮುಸ್ಲಿಂ ರಾಷ್ಟ್ರಗಳನ್ನು ಈ ಬಗ್ಗೆ ಚಿಂತಿಸುವಂತೆ ಮಾಡಿದ್ದಾರೆ. ಕಾಶ್ಮೀರ ವಿವಾದದ ಬಗ್ಗೆ ಇದುವರೆಗೂ ಯಾವುದೇ ಮುಸ್ಲಿಂ ರಾಷ್ಟ್ರಗಳು 370 ವಿಧಿ ವಾಪಸಾತಿ ವಿರೋಧಿಸಿ ಅಥವಾ ಬೆಂಬಲಿಸಿ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೆ, ಮುಂದಿಯೂ ಈ ರಾಷ್ಟ್ರಗಳ ಅಭಿಮತ ಹೀಗೆ ಇರುತ್ತದೆ ಎಂದು ಹೇಳಲು ಆಗುವುದಿಲ್ಲ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا