Urdu   /   English   /   Nawayathi

ಮೂಲ ಮಿಗ್ -21 ಯುದ್ಧ ವಿಮಾನ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ ನಿವೃತ್ತಿ

share with us

ನವದೆಹಲಿ: 21 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನದ  ಮೇಲ್ದರ್ಜೆಗೆ ಏರಿಸಲಾಗದಿರುವ ಆವೃತ್ತಿಯನ್ನು ಈ ವರ್ಷದ ಡಿಸೆಂಬರ್ ನಲ್ಲಿಹಂತ-ಹಂತವಾಗಿ ನಿವೃತ್ತಿಗೊಳಿಸಲಾಗುವುದು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಎಂದು ಮಂಗಳವಾರ ಹೇಳಿದ್ದಾರೆ. 'ಮಿಗ್ 21 ಎಮ್ಎಫ್ ಆವೃತ್ತಿ 44 ವರ್ಷಗಳನ್ನು ಪೂರ್ಣಗೊಳಿಸಿದೆ. ಇದನ್ನು ಡಿಸೆಂಬರ್ ವೇಳೆಗೆ  ಹಂತಹಂತವಾಗಿ ಕೈಬಿಡಲಾಗುವುದು. ಸೆಪ್ಟೆಂಬರ್ ನಲ್ಲಿ ಈ ವಿಮಾನದಲ್ಲಿ ಕೊನೆಯ ಹಾರಾಟ ನಡೆಸುತ್ತೇನೆ.' ಎಂದು ಧನೋವಾ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಿಗ್-21 ಯುದ್ಧ ವಿಮಾನ ನಾಲ್ಕು ದಶಕಗಳಿಂದ ಸೇವೆಯಲ್ಲಿರುವುದಕ್ಕೆ ಧನೋವಾ ಅವರು ಹಿಂದೂಸ್ತಾನ್ ವಿಮಾನ ಕಾರ್ಖಾನೆ (ಎಚ್;ಎಎಲ್) ಅನ್ನು ಶ್ಲಾಘಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا