Urdu   /   English   /   Nawayathi

18 ಪ್ರಯಾಣಿಕರಿದ್ದ ಬಸ್​ಅನ್ನು ಒತ್ತೆಯಾಗಿಟ್ಟುಕೊಂಡ ಉಗ್ರ: ಬೆಚ್ಚಿದ ಬ್ರೆಜಿಲ್​

share with us

ಬ್ರೆಸಿಲಿಯಾ: 20 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಶಾಂತವಾಗಿದ್ದ ಬ್ರೆಜಿಲ್​ ಬೆಳ್ಳಂಬೆಳಗ್ಗೆ ನಡೆದ ಉಗ್ರ ಚಟುವಟಿಕೆಯಿಂದ ಬೆಚ್ಚಿಬಿದ್ದಿದೆ. ಇಲ್ಲಿನ ರಿಯೋ ನಿಟ್ರೈ ಸೇತುವೆ ಬಳಿ ಶಸ್ತ್ರಧಾರಿಯೊಬ್ಬ 18 ಪ್ರಯಾಣಿಕರಿದ್ದ ಬಸ್​ವೊಂದನ್ನು ಒತ್ತೆಯಾಗಿರಿಸಿಕೊಂಡಿದ್ದು, ಬಸ್​ ಅನ್ನು ಮರಳಿ ವಶಕ್ಕೆ ಪಡೆಯಲು ಸೇನೆ ಹಾಗೂ ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಗೋಲೋ ಬ್ರಾಂಚೊಗೆ ತೆರಳುತ್ತಿದ್ದ ಬಸ್​ವೊಂದನ್ನು ಅಡ್ಡಗಟ್ಟಿದ ಶಸ್ತ್ರಧಾರಿಯು, ಗನ್​ ತೋರಿಸಿ ಡ್ರೈವರ್​ಅನ್ನು ಬೆದರಿಸಿದ್ದಾನೆ. ಸೇತುವೆ ಬಳಿ ಬಸ್​ಅನ್ನು ಪಾರ್ಕ್​ ಮಾಡಿ ಪ್ರಯಾಣಿಕರನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ತಿಳಿದುಬಂದಿದೆ. ಬಸ್​ನೊಳಗೆ ಒಬ್ಬನೇ ಉಗ್ರ ಇದ್ದಾನಾ? ಯಾವ ಉದ್ದೇಶದಿಂದ ಕೃತ್ಯ ಎಸಗಿದ್ದಾನೆ ಎಂಬುದು ಇನ್ನಷ್ಟೇ ತಿಳಿದುಬಂದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا