Urdu   /   English   /   Nawayathi

ಡಿಕೆಶಿ ಮನೆಯಲ್ಲಿ ಫೋನ್​ ಟ್ಯಾಪಿಂಗ್​​ ಡಿವೈಸ್​: ಸಿ.ಪಿ. ಯೋಗೇಶ್ವರ್​ ಸಿಡಿಸಿದ್ರು ಹೊಸ ಬಾಂಬ್​

share with us

ಬೆಂಗಳೂರು: 19 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮಾಜಿ ಸಚಿವ ರಮೇಶ್​ ಜಾರಕಿಹೊಳಿ ನಿವಾಸಕ್ಕೆ ಮಾಜಿ ಸಚಿವ ಯೋಗೇಶ್ವರ್ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಿ.ಪಿ.ಯೋಗೇಶ್ವರ್​, ನನ್ನ ಫೋನ್​ 2 ವರ್ಷಗಳಿಂದ ಕದ್ದಾಲಿಕೆ ಆಗುತ್ತಿದೆ. ಕಮಿಷನರ್​ ಬಳಿ ಈ ಕುರಿತು ಮನವಿ ಸಲ್ಲಿಸಿದ್ದೆ. ನನಗೆ ಇರುವ ಮಾಹಿತಿ ಪ್ರಕಾರ ಮಾಜಿ ಸಿಎಂ ಕುಮಾರಸ್ವಾಮಿ ಈ ಕೆಲಸ ಮಾಡಿಸಿದ್ದರು. ಇಂದಿನ ಟೆಕ್ನಾಲಜಿ ಯುಗದಲ್ಲಿ ನಮ್ಮ ಫೋನ್​ ಕದ್ದಾಲಿಸುವ ಕುರಿತು ನಾವೇ ಚೆಕ್​ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಕೇಂದ್ರ ಸರ್ಕಾರವಾಗಲಿ, ಸಿಬಿಐ ಆಗಲಿ ಫೋನ್​ ಟ್ಯಾಪಿಂಗ್​ ವಿಚಾರವನ್ನು ದುರುಪಯೋಗ ಪಡಿಸಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂದರು. ಕೆಲವರು ಹೇಳುವ ಪ್ರಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಎಲೆಕ್ಟ್ರಾನಿಕ್ ಡಿವೈಸ್ ಖರೀದಿಸಿದ್ದ ಡಿ.ಕೆ. ಶಿವಕುಮಾರ್ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಆ ಡಿವೈಸ್​ನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಡಿವೈಸ್ ಮೂಲಕ ತಮಗೆ ಬೇಕಾದವರ ಕರೆ ಕದ್ದಾಲಿಕೆ ಮಾಡಿದ್ದಾರೆ ಎಂದು ಡಿಕೆಶಿ ವಿರುದ್ಧ ಯೋಗೇಶ್ವರ್​ ಈ ಗಂಭೀರ ಆರೋಪ ಮಾಡಿದ್ದಾರೆ.

ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿಲ್ಲ :

ನಾಳೆ ಸಂಪುಟ ರಚನೆ ಆಗ್ತಿದೆ. ಅನರ್ಹ ಶಾಸಕರ ಪ್ರಸ್ತಾಪ ಇಲ್ಲ. ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೆ ಪಕ್ಷ ಯಾವುದೇ ಕೆಲಸ ಕೊಟ್ರು ಅದನ್ನು ಮಾಡಿಕೊಂಡು ಹೋಗುತ್ತೇನೆ. ನಮ್ಮ ಮತ್ತು ಅನರ್ಹ ಶಾಸಕರ ನಡುವೆ ಭಿನ್ನಭಿಪ್ರಾಯಗಳಿಲ್ಲ. ಅವರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ನಾವು ಅವರ ಬೆನ್ನಿಗೆ ನಿಂತಿದ್ದೇವೆ ಎಂದು ಯೋಗೇಶ್ವರ್​ ಹೇಳಿದ್ರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا