Urdu   /   English   /   Nawayathi

ವೈಟ್ ಟಾಪಿಂಗ್ ಅವ್ಯವಹಾರದ ತನಿಖೆಗೆ ರಾಜ್ಯ ಸರ್ಕಾರ ಆದೇಶ

share with us

ಬೆಂಗಳೂರು: 19 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್‍ಗೆ ರಾಜ್ಯಸರ್ಕಾರ ಬ್ರೇಕ್ ಹಾಕಿದೆ. ಮೂರು ಹಂತಗಳಲ್ಲಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿದ್ದ ವೈಟ್‍ಟಾಪಿಂಗ್ ಕಾಮಗಾರಿಯನ್ನು ನಿಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಕಳೆದ 2016-17ನೇ ಸಾಲಿನಲ್ಲಿ 93.47 ಕಿಲೋ ಮೀಟರ್ ಉದ್ದದ 29 ರಸ್ತೆಗಳ ವೈಟ್ ಟಾಪಿಂಗ್‍ಗೆ 800 ಕೋಟಿ ರೂ., ಎರಡನೇ ಹಂತದ 2017-18ನೇ ಸಾಲಿನಲ್ಲಿ 41 ರಸ್ತೆಗಳಲ್ಲಿ 63.26 ಕಿಲೋಮೀಟರ್ ವೈಟ್ ಟಾಪಿಂಗ್ 690 ಕೋಟಿ ವ್ಯಯಿಸಲಾಗಿದ್ದು, ಈಗಾಗಲೇ ಇದರಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳು ಬಂದಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಇನ್ನು 2018-19ರಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯಬೇಕಿದ್ದ 123 ಕಿಲೋಮೀಟರ್ ಉದ್ದದ ವೈಟ್ ಟಾಪಿಂಗ್‍ಗೆ 1139 ಕೋಟಿ ರೂ. ವೆಚ್ಚಕ್ಕೆ ಸಿದ್ಧತೆ ನಡೆಸಲಾಗಿತ್ತು. ಇಂದು ಹೊರಡಿಸಿರುವ ಆದೇಶದನ್ವಯ ತಕ್ಷಣದಿಂದಲೇ ಈ 3ನೇ ಹಂತದ ಯೋಜನೆಯನ್ನು ತಡೆಹಿಡಿದು 1 ಮತ್ತು 2ನೇ ಹಂತದಲ್ಲಿ ನಡೆದಿರುವ ಕಾಮಗಾರಿಯ ಬಗ್ಗೆ ವರದಿ ನೀಡುವಂತೆ ಆದೇಶಿಸಲಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا