Urdu   /   English   /   Nawayathi

ಬೆಂಗಳೂರು ಜನ ಆತಂಕಪಡುವ ಅಗತ್ಯವಿಲ್ಲ: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭರವಸೆ

share with us

ಬೆಂಗಳೂರು: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದ್ದು ಇಲ್ಲಿ ಏನೇ ಅನಾಹುತವಾದರೂ ದೊಡ್ಡ ಸುದ್ದಿಯಾಗಲಿದೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿಸಿಪಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಡಿಸಿಪಿಗಳೊಂದಿಗೆ ಸಭೆ ನಡೆಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಯುಕ್ತರು, ಬೆಂಗಳೂರಿನಲ್ಲಿ‌ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಆದ್ಯತೆ.‌ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚೆತ್ತುಕೊಳ್ಳಲು ಕೆಎಸ್ಐಆರ್​ಪಿ, ಬಾಂಬ್ ನಿಷ್ಕಿಯ ದಳ, ಶ್ವಾನದಳ, ಸಿಎಆರ್ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರ ಕಾರ್ಯವೈಖರಿ, ಜವಾಬ್ದಾರಿಗಳ ಬಗ್ಗೆ ಚರ್ಚಿಸಲಾಗಿದೆ. ನಗರದ ಜನರು ಆತಂಕಪಡುವ ಅಗತ್ಯವಿಲ್ಲ. ಡಿಸಿಪಿಗಳೊಡನೆ ಭದ್ರತೆ ಬಗ್ಗೆ ಸಭೆ ನಡೆಸಲಾಗಿದೆ ಎಂದರು. ಇಲಾಖೆಯಲ್ಲಿ ಚರ್ಚೆಯಾಗುವ ವಿಷಯಗಳು ಹಾಗೂ ಮೆಮೊಗಳು ಅನಗತ್ಯವಾಗಿ‌ ಸೋರಿಕೆಯಾಗಕೂಡದು. ಆಂತರಿಕ ವಿಚಾರಗಳ ಬಗ್ಗೆ ಇನ್​ಸ್ಪೆಕ್ಟರ್ ಸೇರಿದಂತೆ ಯಾವುದೇ ಪೊಲೀಸರು ಮಾಹಿತಿ‌ ನೀಡಬಾರದು ಎಂದು ಎಂದು ಡಿಸಿಪಿಗಳಿಗೆ ಆಯುಕ್ತರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا