Urdu   /   English   /   Nawayathi

ಪ್ರವಾಹದಿಂದ ಮೈಸೂರು ಜಿಲ್ಲೆಗಾದ ನಷ್ಟ ಇಷ್ಟು.. ಇದು ಕಂಪ್ಲೀಟ್​ ಅಂಕಿಅಂಶ..

share with us

ಮೈಸೂರು: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಪ್ರವಾಹದಿಂದ ಮೈಸೂರಿನಲ್ಲಿ ಒಟ್ಟು 4762 ಎಕರೆ ಪ್ರದೇಶದಲ್ಲಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. 2650 ಮನೆಗಳು ನೆರೆಯಿಂದ ಹಾನಿಯಾಗಿವೆ. ಜಿಲ್ಲಾಡಳಿತ ಹಾನಿಗೊಳಗಾಗದ ಪ್ರದೇಶಗಳ ಸಮೀಕ್ಷೆಗೆ ಮುಂದಾಗಿದೆ. ನಂಜನಗೂಡಿನಲ್ಲಿ 317 ಹೆಕ್ಟೇರ್, ಹೆಚ್ ಡಿ ಕೋಟೆಯಲ್ಲಿ 1330, ಹುಣಸೂರಿನಲ್ಲಿ 1620, ಪಿರಿಯಾಪಟ್ಟಣ 815, ಸರಗೂರು 458, ಮೈಸೂರು 4 ಹೆಕ್ಟೇರ್, ಟಿ.ನರಸೀಪುರ 60.73 ಹೆಕ್ಟೇರ್, ಕೆಆರ್‌ನಗರ 158 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗಿದೆ. ನಂಜನಗೂಡಿನಲ್ಲಿ 1132, ಹೆಚ್‌ಡಿಕೋಟೆಯಲ್ಲಿ 651, ಹುಣಸೂರಿನಲ್ಲಿ 192, ಪಿರಿಯಾಪಟ್ಟಣದಲ್ಲಿ 182, ಸರಗೂರು 396, ಮೈಸೂರು 56, ಟಿ.ನರಸೀಪುರ 6, ಕೆಆರ್‌ನಗರದಲ್ಲಿನ 35 ಮನೆ ಸೇರಿ ಜಿಲ್ಲೆಯಲ್ಲಿ ಒಟ್ಟು 2650 
ಮನೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ.

ಪರಿಹಾರ ಕೇಂದ್ರದಲ್ಲಿರುವ ಜನರು:

ನಂಜನಗೂಡಿನ ಶಂಕರ ಮಠ 99, ಸೀತಾರಾಮ ಕಲ್ಯಾಣ ಭವನ 56, ಕಾಮಾಕ್ಷಿ ಬಾಯಿ ಛತ್ರದಲ್ಲಿ 36 ಮಂದಿ, ಹುಣಸೂರಿನಲ್ಲಿ ಕಾಮೇಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ 55, ನಿಲವಾಗಿಲು 10, ಅಬ್ಬೂರು 16, ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸರ್ಕಾರಿ ಶಾಲೆಯಲ್ಲಿ 20 ಮಂದಿ ಸೇರಿದಂತೆ ಒಟ್ಟು 289 ಮಂದಿಗೆ ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ನೆಲೆ ಕಲ್ಪಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا