Urdu   /   English   /   Nawayathi

ಬೆಳಗಾವಿ: ಕೃಷ್ಣಾ ನದಿಯಲ್ಲಿ ಮುಳುಗಿದ ಬೊಲೆರೋ, ಅಧಿಕಾರಿಗಳಿಂದ ಏಳು ಮಂದಿಯ ರಕ್ಷಣೆ

share with us

ಬಾಗಲಕೋಟೆ/ಬೆಳಗಾವಿ: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಬಾಬಾಗಲಕೋಟೆ ಜಮಖಂಡಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನ ಹಿನ್ನೀರಿನಲ್ಲಿ ಜೀಪೊಂದು ಮುಳುಗುತ್ತಿದ್ದಾಗ ಏಳು ಮಂದಿಯ ಪ್ರಾಣ ಉಳಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಜೀಪಿನಲ್ಲಿದ್ದ 7 ರಿಂದ 50 ವರ್ಷದೊಳಗಿನ ಬೆಳಗಾವಿಯ ಅಥಣಿ ನಿವಾಸಿಗಳಾಗಿದ್ದ ಏಳು ಮಂದಿಯ ಪ್ರಾಣವನ್ನು ಉಳಿಸಿದ್ದಾರೆ. ಏಳು ಮಂದಿ ಅಥಣಿಯಿಂದ ಜಮಖಂಡಿಗೆ ಸಾಗುತ್ತಿದ್ದರು,ಆಗ ಚಾಲಕ ರಸ್ತೆ ಮೇಲೆ ತನ್ನ ಗಮನ ಕೇಂದ್ರೀಕರಿಸುವುದು ಹೊರತಾಗಿ ರಸ್ತೆ ಇಕ್ಕೆಲಗಳಲ್ಲಿ ಹರಿಯುತ್ತಿದ್ದ ಕೃಷ್ಣಾ ನದಿ ಪ್ರವಾಹದ ನೀರಿನತ್ತ ಗಮನ ಹರಿಸಿದ್ದ.. ಕಾರಣ ಬೊಲೆರೋ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಕೃಷ್ಣೆಗೆ ಉರುಳಿದೆ. ಜೀಪಿನ ಹಿಂದೆ ಬರುತ್ತಿದ್ದ ಕೃಷಿ ಇಲಾಖೆಯ ವಾಹನ ಚಾಲಕ ವಿನೋದ್ ಬರಗಿ (30) ತನ್ನ ಕಣ್ಮುಂದೆ ಜೀಪು ಮುಳುಗುತ್ತಿದ್ದದ್ದನ್ನು ಕಂಡಿದ್ದಾನೆ.ತಕ್ಷಣ ಆತ ಕಾರನ್ನು ನಿಲ್ಲಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಎಚ್ಚರಿಸಿದ್ದಾನೆ. ತಕ್ಷಣ ಮುಳುಗುತ್ತಿದ್ದ ಜೀಪಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ನದಿಗೆ ಹಾರಿದ್ದ ಚಾಲಕ ಜೀಪಿನ ಗಾಜನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾನೆ.ನೋಡಲ್ ಅಧಿಕಾರಿ ಬಿ.ಜೆ.ಮಲ್ಲೆಡ್ ಮತ್ತು ಸರ್ಕಾರಿ ಶಾಲೆಯ ಶಿಕ್ಷಕ ಸಂಗಮೇಶ್ ಸಹ ಜೀಪಿನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದರು. "ಸಾರ್ವಜನಿಕರು ಅಪಾಯದಲ್ಲಿದ್ದ ಏಳು ಮಂದಿಯ ರಕ್ಷಣೆಗೆ ಸಹಾಯ ನೀಡಿದ್ದಾರೆ.ನಾವು ಚಿಕ್ಕ ಹುಡುಗ ಸೇರಿದಂತೆ ಆರು ಸದಸ್ಯರನ್ನು ಸುಲಭವಾಗಿ ಹೊರತಂದೆವು. ಆದರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವೃದ್ಧ ಮಹಿಳೆಯನ್ನು ರಕ್ಷಿಸಲುಹೆಣಗಬೇಕಾಯಿತು.ನಾವು ಗಾಜು ಮುರಿದು ಅವಳನ್ನು ಹೊರಗೆ ಕರೆತಂದೆವು. ಅವಳು ಪ್ರಜ್ಞಾಹೀನಳಾಗಿದ್ದಳು ಮತ್ತು ಸಮಯಕ್ಕೆ ಸರಿಯಾಗಿ ಆಗಮಿಸಿದ ಆಂಬ್ಯುಲೆನ್ಸ್ನಲ್ಲಿ ಆಕೆ ಆಸ್ಪತ್ರೆಗೆ ಧಾವಿಸಿದ್ದಾರೆ.ಪ್ರಯಾಣಿಕರು ಮರಾಠಿ ಮಾತನಾಡುತ್ತಿದ್ದರು.ಅವರಿಗೆ ಕನ್ನಡ ಗೊತ್ತಿರಲಿಲ್ಲ"ಬರಗಿ ಹೇಳಿದ್ದಾರೆ. ಅಪಘಾತದ ಸ್ಥಳದಲ್ಲಿ ನೀರು  10 ಅಡಿಗಿಂತಲೂ ಕಡಿಮೆ ಆಳದಲ್ಲಿತ್ತು, ಆದರೆ ವಾಹನವು ಸಂಪೂರ್ಣವಾಗಿ ಮುಳುಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಕುರೈ ಮಾರುತಿ ಪಾಟೀಲ್ (50) ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದ ಆರುಮಂದಿ ಸಣ್ಣಪುಟ್ಟ ಗಾಯಗಳೊಡನೆ ಪಾರಾಗಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا