Urdu   /   English   /   Nawayathi

ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ

share with us

ಉಪ್ಪಿನಂಗಡಿ: 03 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ಹೆದ್ದಾರಿ 75ರ ಉದನೆ ಬಳಿ ಎಂಜಿರ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಬುಲೆಟ್ ಟ್ಯಾಂಕರ್ ರಸ್ತೆಗೆ ಅಡ್ಡ ಪಲ್ಟಿಯಾಗಿ ಗ್ಯಾಸ್ ಸೋರಿಕೆಯಾದ ಪರಿಣಾಮ ಹೆದ್ದಾರಿಯಲ್ಲಿ ಸುಮಾರು 6 ತಾಸು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸಾಯಂಕಾಲ ಬಳಿಕ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿತು. ಅವಘಡ ಸಂದರ್ಭ ಚಾಲಕ ತಮಿಳುನಾಡು ಮೂಲದ ಪಣಿರಾಜ್ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗ್ಯಾಸ್ ವರ್ಗಾವಣೆ: ಮಂಗಳೂರಿನಿಂದ ಬೆಂಗಳೂರು ಕಡೆ ಗ್ಯಾಸ್ ಹೇರಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಸಂದರ್ಭ ಟ್ಯಾಂಕರ್‌ನ ಒಂದು ಮುಚ್ಚಳ ತುಂಡಾಗಿ ಗ್ಯಾಸ್ ಸೋರಿಕೆಯುಂಟಾಯಿತು. ಕೂಡಲೇ ಸ್ಥಳೀಯರು ಹಾಗೂ ಇತರ ಟ್ಯಾಂಕರ್ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆ ಹಿಡಿಯಲಾಯಿತು. ಸ್ಥಳಕ್ಕೆ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಅಗ್ನಿಶಾಮಕದಳ ವಾಹನ ಆಗಮಿಸಿತು. ಸೋರಿಕೆಯಾಗುತ್ತಿದ್ದ ಟ್ಯಾಂಕರ್‌ನಿಂದ ಗ್ಯಾಸ್‌ನ್ನು ಇನ್ನೊಂದು ಟ್ಯಾಂಕರ್‌ಗೆ ವರ್ಗಾಯಿಸಲಾಯಿತು. ಸಾಯಂಕಾಲ 5 ಗಂಟೆ ಹೊತ್ತಿಗೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಟ್ಯಾಂಕರ್‌ನ್ನು ರಸ್ತೆಯಿಂದ ಬದಿಗೆ ಸರಿಸಿ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಹೀಗಾಗಿ ಮಧ್ಯಾಹ್ನ 11ರಿಂದ ಸಾಯಂಕಾಲ 5ರ ತನಕ ವಾಹನ ಸಂಚಾರ ವ್ಯತ್ಯಯಗೊಂಡಿತು. ಉಪ್ಪಿನಂಗಡಿ ಎಸ್‌ಐ ನಂದಕುಮಾರ್ ಮತ್ತು ಸಿಬ್ಬಂದಿ, ಪುತ್ತೂರು ಸಂಚಾರಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಇದ್ದು ಮುಂಜಾಗ್ರತಾ ಕ್ರಮ ಕೈಗೊಂಡರು.

ಪರ್ಯಾಯ ರಸ್ತೆಯಲ್ಲಿ ವಾಹನ ಸಂಚಾರ
ಬೆಂಗಳೂರು ಕಡೆ ಹೋಗುವ ವಾಹನಗಳಿಗೆ ಉಪ್ಪಿನಂಗಡಿ ಮತ್ತು ಪೆರಿಯಶಾಂತಿಯಿಂದ ಬದಲಿ ರಸ್ತೆ ಸೂಚಿಸಲಾಗಿತ್ತು. ಅದರಂತೆ ವಾಹನಗಳು ಉಪ್ಪಿನಂಗಡಿ-ಕಡಬ-ಮರ್ದಾಳ-ಗುಂಡ್ಯ ಹಾಗೂ ಧರ್ಮಸ್ಥಳದ ಕಡೆಯಿಂದ ಹೋಗುವ ವಾಹನಗಳು ಪೆರಿಯಶಾಂತಿ-ಇಚ್ಲಂಪಾಡಿ-ಮರ್ದಾಳ-ಗುಂಡ್ಯ ರಸ್ತೆ ಮೂಲಕ ಸಂಚಾರ ನಡೆಸಿದವು. ಭಾರಿ ಲಾರಿ, ಟ್ರಕ್‌ಗಳು ರಸ್ತೆ ಇಕ್ಕೆಲಗಳಲ್ಲಿ ನಿಂತಿರುವುದು ಕಂಡು ಬಂತು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا