Urdu   /   English   /   Nawayathi

ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್‌ ಶಾಸಕ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲು

share with us

ಬೆಂಗಳೂರು: 18 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್‌ ನಾಯಕರಿದ್ದ ರೆಸಾರ್ಟ್‌ನಿಂದ ಬುಧವಾರ ರಾತ್ರಿ ನಾಪತ್ತೆಯಾಗಿದ್ದ ಕಾಗೆವಾಡದ ಕಾಂಗ್ರೆಸ್‌ ಶಾಸಕ ಶ್ರೀಮಂತ ಪಾಟೀಲ್‌ ಇಂದು ಮುಂಬೈ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೇವನಹಳ್ಳಿಯ ಪ್ರಕೃತಿ ರೆಸಾರ್ಟ್‌ನಲ್ಲಿ ಇತರೇ ಕಾಂಗ್ರೆಸ್‌ ಶಾಸಕರ ಜೊತೆಗಿದ್ದ ಶ್ರೀಮಂತ ಪಾಟೀಲ್‌ ಬುಧವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಇವರ ನಾಪತ್ತೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದು, ಮುಂಬೈನ ಅಜ್ಞಾತ ಸ್ಥಳದಲ್ಲಿರುವ ಅತೃಪ್ತ ಶಾಸಕರ ಜೊತೆ ಸೇರಿರುವ ಬಗ್ಗೆ ಸಂಶಯಗಳು ವ್ಯಕ್ತವಾಗಿದ್ದವು. ಆದರೆ ಶ್ರೀಮಂತ ಪಾಟೀಲ್‌  ಅವರು ಎದೆನೋವು ಕಾರಣದಿಂದ ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇತ್ತ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಅಧಿವೇಶನ ನಡೆಯುತ್ತಿದ್ದು, ಪ್ರಮುಖ ಮೂರೂ ಪಕ್ಷಗಳು ತಮ್ಮ ಶಾಸಕರಿಗೆ ಸದನಕ್ಕೆ ಹಾಜರಿರುವಂತೆ ವಿಪ್‌ ಜಾರಿ ಮಾಡಿವೆ. ಹೀಗಾಗಿ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಎದೆ ನೋವಿಗೆ ಕಾಗೆವಾಡದ ಶಾಸಕರು ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿದ್ದೇಕೆ ಎಂಬ ಅನುಮಾನ ಕಾಡಿದೆ.

ANI✔@ANI

: Karnataka Congress MLA Shrimant Patil who was staying with other Congress MLAs at Windflower Prakruthi Resort in Bengaluru, reached Mumbai last night, currently admitted to a hospital in Mumbai after he complained of chest pain.

View image on Twitter

415

11:54 AM - Jul 18, 2019

Twitter Ads info and privacy

116 people are talking about this

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا