Urdu   /   English   /   Nawayathi

ಕೈ ಪಕ್ಷಕ್ಕೆ ಗುಡ್​ ಬೈ ಹೇಳಿದ್ದ ಅಲ್ಪೇಶ್​ ಠಾಕೂರ್​ ಬಿಜೆಪಿ ಸೇರ್ಪಡೆ

share with us

ಅಹಮದಾಬಾದ್(ಗುಜರಾತ್​): 18 ಜುಲೈ 2019 (ಫಿಕ್ರೋಖಬರ್ ಸುದ್ದಿ) ಲೋಕಸಭಾ ಚುನಾವಣೆಗೂ ಒಂದು ದಿನ ಮುಂಚಿತವಾಗಿ ಕಾಂಗ್ರೆಸ್​ ಪಕ್ಷಕ್ಕೆ ಗುಡ್​ ಬೈ ಹೇಳಿದ್ದ ಶಾಸಕ ಅಲ್ಪೇಶ್​ ಠಾಕೂರ್​ ಮತ್ತು ದವಲ್​ಸಿಂಗ್ ಜಲಾ ಕೊನೆಗೂ ಬಿಜೆಪಿ ಸೇರಿದ್ದಾರೆ.

ಗುಜರಾತ್​ ಬಿಜೆಪಿ ರಾಜ್ಯಾಧ್ಯಕ್ಷ ಜಿತು ವಘಾನಿ ನೇತೃತ್ವದಲ್ಲಿ ಕಮಲ ಪಾಳಯ ಸೇರಿಕೊಂಡಿದ್ದಾರೆ ಈ ಇಬ್ಬರು ಮುಖಂಡರು. ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ ಅವರು 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಗುಜರಾತ್​ನಲ್ಲಿ ಹಾರ್ದಿಕ್​ ಪಟೇಲ್​, ಜಿಗ್ನೇಶ್​ ಮೇವಾನಿ ಜತೆ ಸೇರಿ ಅಲ್ಪೇಶ್​ ಠಾಕೂರ್​ ಕೂಡ ಬಿಜೆಪಿ ವಿರುದ್ಧ ಪ್ರಬಲ ಹೋರಾಟ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲ ಮುಡಿದಿದ್ದಾರೆ. ಗುಜರಾತ್ ಕಾಂಗ್ರೆಸ್ ಘಟಕದಲ್ಲಿನ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದ ಅಲ್ಪೇಶ್, ಪಕ್ಷದಲ್ಲಿ ಯುವ ಮುಖಂಡರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا