Urdu   /   English   /   Nawayathi

ಭಾರತದ ಕುಲಭೂಷಣ್ ಜಾದವ್ ಗಲ್ಲು ಶಿಕ್ಷೆ ರದ್ದು; ಐಸಿಜೆ ತೀರ್ಪಿಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸ್ವಾಗತ

share with us

ನವದೆಹಲಿ: 18 ಜುಲೈ 2019 (ಫಿಕ್ರೋಖಬರ್ ಸುದ್ದಿ) ಬೇಹುಗಾರಿಕೆ ನಡೆಸಿದ ಆರೋಪದ ಮೇರೆಗೆ ಪಾಕಿಸ್ತಾನ ಬಂಧಿಸಿದ್ದ ಭಾರತದ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ರದ್ದುಗೊಳಿಸಿದ್ದು, ನ್ಯಾಯಾಲಯದ ತೀರ್ಪಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ತೀರ್ಪನ್ನು ಸ್ವಾಗತಿಸಿದ್ದಾರೆ. ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಭಾರತದ ಕುಲಭೂಷಣ್ ಯಾದವ್​​ರ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪಿಗೆ ಭಾರತದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ನ್ಯಾಯಾಲಯದ ತೀರ್ಪಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಗಣ್ಯರು ತೀರ್ಪನ್ನು ಸ್ವಾಗತಿಸಿದ್ದಾರೆ. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ನಾಯಕರು, ಐಸಿಜೆ ತೀರ್ಪು ನ್ಯಾಯದ ಪರವಾಗಿದೆ ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇದು ನ್ಯಾಯ ಮತ್ತು ಸತ್ಯಕ್ಕೆ ಸಂದ ಜಯವಾಗಿದ್ದು, ಪ್ರಕರಣದಲ್ಲಿ ಜಾಧವ್ ಗೆ ಖಂಡಿತಾ ನ್ಯಾಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮಾಜಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಐಸಿಜೆ ತೀರ್ಪಿನಿಂದಾಗಿ ಕುಲಭೂಷಣ್ ಜಾಧವ್ ಕುಟುಂಬಸ್ಥರಿಗೆ ನೆಮ್ಮದಿ ದೊರೆದಂತಾಗಿದೆ. ಪ್ರಕರಣದಲ್ಲಿ ಭಾರತಕ್ಕೆ ಖಂಡಿತಾ ನ್ಯಾಯ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಐಸಿಜೆ ತೀರ್ಪು ಸತ್ಯ ಮತ್ತು ಮಾನವೀಯತೆ ಘನತೆಗೆ ಸಂದ ಜಯವಾಗಿದೆ. ಮೋದಿ ಸರ್ಕಾರದ ರಾಜತಾಂತ್ರಿಕತೆಗೆ ಸಂದ ಜಯವಾಗಿದೆ ಎಂದು ಶಾ ಟ್ವೀಟ್ ಮಾಡಿದ್ದಾರೆ.

Narendra Modi@narendramodi

We welcome today’s verdict in the @CIJ_ICJ. Truth and justice have prevailed. Congratulations to the ICJ for a verdict based on extensive study of facts. I am sure Kulbhushan Jadhav will get justice.

Our Government will always work for the safety and welfare of every Indian.

86.4K

8:31 PM - Jul 17, 2019

Twitter Ads info and privacy

19.8K people are talking about this

Sushma Swaraj@SushmaSwaraj

I hope the verdict will provide the much needed solace to the family members of Kulbhushan Jadhav. /4

12.1K

6:40 PM - Jul 17, 2019

Twitter Ads info and privacy

1,653 people are talking about this

Amit Shah@AmitShah

A great day at the @CIJ_ICJ! The verdict is a victory of truth and protects human dignity.

It is yet another manifestation of Modi Government’s diplomatic efforts and commitment to protect all Indians.

I congratulate Harish Salve ji for his stupendous efforts through the case.

20.8K

9:36 PM - Jul 17, 2019

Twitter Ads info and privacy

3,895 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا