Urdu   /   English   /   Nawayathi

ಮುಂಬೈ ಹೋಟೆಲ್​​ನಿಂದ ಅತೃಪ್ತ ಶಾಸಕರು ಶಿಫ್ಟ್​​​... ಎಲ್ಲಿಗೆ ಹೋದರು!?

share with us

ಮುಂಬೈ:‌ 17 ಜುಲೈ 2019 (ಫಿಕ್ರೋಖಬರ್ ಸುದ್ದಿ) ತಾವು ತಂಗಿದ್ದ ಹೋಟೆಲ್​ನಿಂದ ಅತೃಪ್ತ ಶಾಸಕರು ಶಿಫ್ಟ್ ಆಗಿದ್ದು, ಎತ್ತ ಹೋಗಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಸದ್ಯ ಶಾಸಕರು ತಂಗಿದ್ದ ಮುಂಬೈ ಹೋಟೆಲ್‌ನ ಚಿತ್ರಣದ ವಾಕ್ ಥ್ರೂ ಇಲ್ಲಿದೆ. ತಮ್ಮನ್ನು ಮನವೊಲಿಸಲು ಮತ್ತೆ ಕಾಂಗ್ರೆಸ್ ನಾಯಕರು ಬರ್ತಾರೆ ಎಂಬ ಮಾಹಿತಿಯಿಂದ ಅಜ್ಞಾತ ಸ್ಥಳಕ್ಕೆ ರಾತ್ರೋರಾತ್ರಿ ಅತೃಪ್ತ ಶಾಸಕರು ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. ಕಳೆದೊಂದು ವಾರದಿಂದ ಮುಂಬೈನ ರಿನಾಯ್ಸಾನ್ಸ್ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು, ಇದೀಗ ತಮ್ಮ ವಾಸ್ತವ್ಯದ ಸ್ಥಳ ಬದಲಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ರಿನಾಯ್ಸನ್ಸ್ ಹೋಟೆಲ್​ನಲ್ಲಿ ಎಂದಿನಂತೆ ಇವತ್ತು ಸಹ ಪೊಲೀಸ್ ಭದ್ರತೆಯತೆ ನಿಯೋಜಿಸಲಾಗಿದೆ. ಮುಂಬೈನ ಅಜ್ಞಾತ ಸ್ಥಳದಿಂದಲೇ ನಾವು ವಿಧಾನಸೌಧಕ್ಕೆ ಬರೋದಿಲ್ಲ ಎಂಬ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸುಪ್ರೀಂ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅತೃಪ್ತರು, ಯಾವುದೇ ಕಾರಣಕ್ಕೂ ನಾಳೆಯ ವಿಶ್ವಾಸಮತ ಯಾಚನೆಗೆ ತೆರಳುವ ಪ್ರಶ್ಮೆಯೇ ಬರೋದಿಲ್ಲ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا