Urdu   /   English   /   Nawayathi

ಭಾರತ ಸರ್ಕಾರಕ್ಕೆ 261 ಭಾರತೀಯ ಕೈದಿಗಳ ಪಟ್ಟಿ ನೀಡಿದ ಪಾಕ್

share with us

ಇಸ್ಲಾಮಾಬಾದ್: 02 ಜುಲೈ 2019 (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ ಜೈಲಿನಲ್ಲಿರುವ 261 ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕ್ ಸರ್ಕಾರ ಸೋಮವಾರ ಭಾರತೀಯ ರಾಯಭಾರಿಗೆ ಹಸ್ತಾಂತರಿಸಿದೆ. ಉಭಯ ದೇಶಗಳ ನಡುವೆ ಮೇ 21, 2008ರಲ್ಲಿ ನಡೆದ ಕಾನ್ಸುಲರ್ ಪ್ರವೇಶ ಒಪ್ಪಂದಡಿ 209 ಮೀನುಗಾರರು ಸೇರಿದಂತೆ ಪಾಕಿಸ್ತಾನದ ಜೈಲಿನಲ್ಲಿರುವ 261 ಕೈದಿಗಳ ಪಟ್ಟಿಯನ್ನು ಭಾರತದ ರಾಯಭಾರಿಗೆ ಹಸ್ತಾಂತರಿಸಲಾಗಿದೆ ಎಂದು ಪಾಕ್ ವಿದೇಶಾಂಗ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ ಸರ್ಕಾರ ಸಹ ತನ್ನ ದೇಶದ ಜೈಲಿನಲ್ಲಿರುವ ಪಾಕ್ ಕೈದಿಗಳ ಪಟ್ಟಿಯನ್ನು ದೆಹಲಿಯಲ್ಲಿರುವ ತನ್ನ ರಾಯಭಾರಿಗೆ ಹಸ್ತಾಂತರಿಸಬೇಕು ಎಂದು ಪಾಕ್ ವಿದೇಶಾಂಗ ಕಚೇರಿ ಹೇಳಿದೆ. ಕಾನ್ಸುಲರ್ ಪ್ರವೇಶ ಒಪ್ಪಂದದಂತೆ ಎರಡೂ ದೇಶಗಳು ತಮ್ಮ ದೇಶದಲ್ಲಿರುವ ವಿರುದ್ಧ ದೇಶದ ಕೈದಿಗಳನ್ನು ವರ್ಷಕ್ಕೆ 2 ಬಾರಿ ಜನವರಿ 1 ಹಾಗೂ ಜುಲೈ 1ರಂದು ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಬೇಕು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا