Urdu   /   English   /   Nawayathi

ಚಿಕ್ಕೋಡಿ: ಕಬ್ಬಿನ ಗದ್ದೆಯಲ್ಲಿ ಶವ ಪತ್ತೆ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

share with us

ಚಿಕ್ಕೋಡಿ: 24 ಜೂನ್ 2019 (ಫಿಕ್ರೋಖಬರ್ ಸುದ್ದಿ) ಐನಾಪೂರ - ಕುಡಚಿ ರಸ್ತೆ ಮಧ್ಯದ ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿದ್ದು ಸುಮಾರು 37 ವಯಸ್ಸಿನ ವ್ಯಕ್ತಿಯನ್ನ ಕೊಲೆ ಮಾಡಲಾಗಿದೆ. ಶವದ ಕಿಸೆಯಲ್ಲಿ ಪ್ಯಾನ್ ಕಾರ್ಡ್​​​​ಗೆ ನೀಡಲು ಬೇಕಾದ ದಾಖಲಾತಿಗಳು ಸಿಕ್ಕಿದ್ದು, ಆ ದಾಖಲಾತಿಗಳ ಪ್ರಕಾರ ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಪಾರೀಸ್​ ಜಿನಪ್ಪ ಜಮಖಂಡಿ (37) ಎಂದು ಗುರುತಿಸಿಲಾಗಿದೆ.ಸ್ಥಳಕ್ಕೆ ಬೆಳಗಾವಿ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದ್ದು. ಅಥಣಿ ಡಿವೈಎಸ್ಪಿ ರಾಮಗೊಂಡ ಬಸರಗಿ, ಸಿಪಿಐ ಅಲಿಸಾಬ್​ ಐ.ಬಿ ಹಾಗೂ ಕಾಗವಾಡ ಪಿಎಸ್ಐ ಹಣಮಂತ ಶಿರಹಟ್ಟಿ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಈ ಘಟನೆ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا