Urdu   /   English   /   Nawayathi

ಮನ್ಸೂರ್​​​​​​ ರಾಜಕಾರಣಿಗಳ ಪಟ್ಟಿ ಕೊಡಲಿ, ರಕ್ಷಣೆ ಜವಾಬ್ದಾರಿ ಪೊಲೀಸರದ್ದು: ಸಚಿವ ಜಮೀರ್​

share with us

ಬೆಂಗಳೂರು: 24 ಜೂನ್ 2019 (ಫಿಕ್ರೋಖಬರ್ ಸುದ್ದಿ) ಐಎಂಎ ಹಗರಣದಲ್ಲಿ ಯಾವ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ಮನ್ಸೂರ್ ಖಾನ್ ಪಟ್ಟಿ ಕೊಡಲಿ, ನಾನು ಮತ್ತೊಮ್ಮೆ ಅವರಿಗೆ ಮನವಿ ಮಾಡುತ್ತೇನೆ ಎಂದು ಆಹಾರ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಐಎಂಎ ಮಾಲೀಕ ಮನ್ಸೂರ್ ಖಾನ್ ವಿಡಿಯೋ ಬಿಡುಗಡೆ ಹಿನ್ನೆಲೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಧ್ಯಮಗಳ ಮೂಲಕ ಮನ್ಸೂರ್ ಖಾನ್​ಗೆ ನಾನು ಈ ಹಿಂದೆಯೇ ನೀವು ಮೊದಲು ಬನ್ನಿ ಎಂದಿದ್ದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹಾಗೆಯೇ ಯಾವ ರಾಜಕಾರಣಿಗಳು ಈ ಪ್ರಕರಣದಲ್ಲಿ ಇದ್ದಾರೆ ಅಂತಾನೂ ಗೊತ್ತಾಗಬೇಕು ಎಂದರು. ನಮ್ಮ ಸರ್ಕಾರ ಬಡವರ ಪರವಾಗಿದೆ. ಹೀಗಾಗಿ ನಾನು ಮನ್ಸೂರ್ ಖಾನ್​ಗೆ ಮನವಿ ಮಾಡಿಕೊಂಡಿದ್ದೇನೆ. ಮನ್ಸೂರ್ ಖಾನ್ ಮೊದಲು ಬಂದು ಲಿಸ್ಟ್ ಕೊಡಲಿ ಎಂದು ಹೇಳಿದೆ. ಅವರು, ನಿನ್ನೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕೆಲವರ ಹೆಸರು ಹೇಳಿದ್ದಾನೆ. ಈ ಕುರಿತು ಎಸ್ಐಟಿ ತನಿಖೆ ನಡೆಸುತ್ತೆ. ಯಾರು ಅವನ ಬಳಿ ದುಡ್ಡು ತಿಂದಿದ್ದಾರೆ ಅದೂ ಗೊತ್ತಾಗಬೇಕು. ಅವನು 1,350 ಕೋಟಿ ಹಣ ಇದೆ ಅಂತ ಹೇಳಿದ್ದಾನೆ. ಅದನ್ನು ಯಾವ ರಾಜಕಾರಣಿಗಳು, ಅಧಿಕಾರಿಗಳು ತಿಂದಿದ್ದಾರೆ ಗೊತ್ತಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ಆತ ಜನರಿಗೆ 2 ಸಾವಿರ ಕೋಟಿಯಷ್ಟು ಹಣ ನೀಡಬೇಕಾಗಿದೆ. ಹಾಗಾಗಿ ಆತ ಮೊದಲು ಆತನ ಜೊತೆ ಕೈ ಜೋಡಿಸಿದವರ ಪಟ್ಟಿ ಕೊಡಲಿ. ಈ ತನಿಖೆಯಲ್ಲಿ ಮನ್ಸೂರ್ ಖಾನ್​ಗೆ ಪೊಲೀಸರು ರಕ್ಷಣೆ ಕೊಡಲಿದ್ದಾರೆ ಎಂದು ಭರವಸೆ ನೀಡಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا