Urdu   /   English   /   Nawayathi

ಸ್ಟೇರಿಂಗ್ ಮೇಲೆ ಕಾಲಿಟ್ಟು ಪ್ರಾಣಬಿಟ್ಟ ಚಾಲಕ: ಸಿಮೆಂಟ್‌ ಟ್ಯಾಂಕರ್‌ನಲ್ಲಿ ಶವ ಪತ್ತೆ

share with us

ಕಲಬುರಗಿ: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಬಸ್​ಸ್ಟ್ಯಾಂಡ್​ ಬಳಿ ನಿಲ್ಲಿಸಿದ್ದ ಸಿಮೆಂಟ್ ಟ್ಯಾಂಕರ್​ನಲ್ಲಿ ಚಾಲಕನ ಮೃತದೇಹ ಪತ್ತೆಯಾಗಿರುವ ಘಟನೆ ಚಿಂಚೋಳಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕಳೆದ ಮೂರು ದಿನಗಳಿಂದ ಟ್ಯಾಂಕರ್​ವೊಂದು ಗ್ರಾಮದ ರಸ್ತೆ ಬದಿಯಲ್ಲಿ ನಿಂತಿದ್ದು, ಸ್ಟೇರಿಂಗ್ ಮೇಲೆ ಕಾಲಿಟ್ಟುಕೊಂಡು ಚಾಲಕ ಮಲಗಿದ ಸ್ಥಿತಿಯಲ್ಲಿಯೇ ಇದ್ದಾನೆ. ಅನುಮಾನಗೊಂಡ ಗ್ರಾಮಸ್ಥರು ಟ್ಯಾಂಕರ್ ಕ್ಯಾಬಿನ್ ಪ್ರವೇಶಿಸಿದಾಗ ಚಾಲಕ ಸಾವನ್ನಪ್ಪಿರುವ ಸಂಗತಿ ಬಯಲಾಗಿದೆ.  ಮೃತನನ್ನು ಚಿಂಚೋಳಿ ತಾಲೂಕು ಚಿಮ್ಮಯಿದಲಾಯಿ ಗ್ರಾಮದ ಮುಜೀಬ್ ಬುರುಳಿ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವಂತೆ ಕಂಡುಬಂದಿದೆ. ಟ್ಯಾಂಕರ್ ಚಾಲನೆ ವೇಳೆ ಎದೆನೋವು ಕಾಣಿಸಿಕೊಂಡು ರಸ್ತೆಬದಿಗೆ ವಾಹನ ನಿಲ್ಲಿಸಿ, ನೀರು ಕುಡಿಯಲು ಪ್ರಯತ್ನಿಸಿದಾಗ ಸಾವನ್ನಪ್ಪಿದಂತೆ ಕಂಡುಬಂದಿದೆ. ನೀರಿನ ಬಾಟಲಿ ಎದೆಯ ಮೇಲೆಯೇ ಇದೆ. ಆದ್ರೆ, ಕಿವಿಯಿಂದ ರಕ್ತ ಸೋರಿಯಾಗಿದ್ದು, ಹಲವು ಅನುಮಾನ ಮೂಡಿಸಿದೆ. ಸಿಮೆಂಟ್ ಟ್ಯಾಂಕರ್ ಲಾರಿ ನಂಬರ್ TS 11 UC 1913 ಆಗಿದ್ದು, ಹೈದ್ರಾಬಾದ್​ ನಿವಾಸಿಯೊಬ್ಬರಿಗೆ ಸೇರಿದ ವಾಹನ ಇದಾಗಿದೆ. ಈ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا